ತುಮಕೂರು : ಅಧಿಕಾರಿಗಳ ವೈಫಲ್ಯಕ್ಕೆ ಡಿಸಿಎಂ ಪರಂ ಕಾರಣ ಎಂದ ಶಾಸಕ!!

ತುಮಕೂರು :

    ಅಧಿಕಾರಿಗಳ ವೈಫಲ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರೇ ಕಾರಣ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ವಿರುದ್ಧ ಬಿಜೆಪಿ ಶಾಸಕ ಜೆ.ಸಿ ಮಾಧುಸ್ವಾಮಿ ತೀವ್ರ ಆಕ್ರೋಶ ಹೊರ ಹಾಕಿದರು.

      ಜಿ.ಪಂ.ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತ್ರೈಮಾಸಿಕ ಕೆಡಿಪಿ ಸಭೆಯ ಮಾಹಿತಿಯನ್ನು ಶಾಸಕರುಗಳಿಗೆ ಮುಂಚಿತವಾಗಿ ಅಧಿಕಾರಿಗಳು ತಿಳಿಸಿಲ್ಲ. ಸಭೆಯ ನೋಟೀಸ್ ಹಾಗೂ ಇಲಾಖೆಗಳ ಪ್ರಗತಿ ವರದಿಯನ್ನು ಮುಂಚಿತವಾಗಿ ತಲುಪಿಸಿಲ್ಲ. ಸಭೆಗೆ ಬಂದು ನಾವು ಏನು ಚರ್ಚೆ ಮಾಡಬೇಕು. ಅಧಿಕಾರಿಗಳು ಹೇಳಿದ್ದನ್ನು ಕೇಳಿಸಿಕೊಂಡು ಹೋಗಬೇಕೆ ಎಂದು ಅಸಮಾಧಾನ ಹೊರ ಹಾಕಿದ ಶಾಸಕರು, ಅಧಿಕಾರಿಗಳ ವೈಫಲ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ನೇರ ಹೊಣೆಗಾರರನ್ನಾಗಿಸಿದರು.

      ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಸಿಎಂ ಡಾ.ಜಿ ಪರಮೇಶ್ವರ್ ಕಡೆಗೆ ತಿರುಗಿ, ನಿಮ್ಮ ಬೇಜವಾಬ್ದಾರಿಯಿಂದ ಹೀಗಾಗುತ್ತಿದೆ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಡಿಸಿಎಂ ಪರಮೇಶ್ವರ್, ‘ಮಾಧುಸ್ವಾಮಿ, ಯು ಡೋಂಟ್ ಟಾಕ್ ಲೈಕ್ ದಟ್, ನೀವು ಹಾಗೆ ಮಾತನಾಡಬಾರದು’ ಎಂದು ಜೋರು ಧ್ವನಿಯಲ್ಲೇ ಮನವಿ ಮಾಡಿದರು.

      ಡಿಸಿಎಂ ಪರ ಬ್ಯಾಟ್ ಬೀಸಲು ಮುಂದಾಗ ಕುಣಿಗಲ್ ಶಾಸಕ ಡಾ.ರಂಗನಾಥ್ ರನ್ನು ಸಹ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು. ಆಗ ಮಧ್ಯಪ್ರವೇಶ ಮಾಡಿದ ಪರಮೇಶ್ವರ್, ‘ನೀವು ನನ್ನನ್ನು ಬೈಯಿರಿ. ಸರಕಾರವನ್ನು ಬೈಯಿರಿ’ ಎಂದು ಬಿಜೆಪಿ ಶಾಸಕರ ಗಮನವನ್ನು ತಮ್ಮತ್ತ ಸೆಳೆದು ರಂಗನಾಥ್ ರನ್ನು ಟೀಕಾ ಪ್ರಹಾರದಿಂದ ಬಚಾವು ಮಾಡಿದರು.

      ಇದಕ್ಕೂ ಮುನ್ನ ಅಧಿಕಾರಿಗಳು ಬರ‌ ನಿರ್ವಹಣೆಯನ್ನು ಸರಿಯಾಗಿ ಮಾಡಿಲ್ಲ. ಬರ ಕಾಮಗಾರಿಯ ಸಂಪೂರ್ಣ ತನಿಖೆಯಾಗಬೇಕು ಎಂದು ಬಿಜೆಪಿ ಶಾಸಕರುಗಳಾದ ಜೆ.ಸಿ ಮಾಧುಸ್ವಾಮಿ, ಬಿ.ಸಿ ನಾಗೇಶ್ ಹಾಗೂ ಮಸಾಲೆ ಜಯರಾಮ್ ಒತ್ತಾಯಿಸಿದರು. ಬರ ಕುರಿತ ಚರ್ಚೆಯು ಡಿಸಿಎಂ ಹಾಗೂ ಮಾಧುಸ್ವಾಮಿ ನಡುವೆ ತೀವ್ರವಾದ ಜಟಾಪಟಿಗೆ ಕಾರಣವಾಯಿತು. ಬಿಜೆಪಿ ಶಾಸಕರನ್ನು ಸಮಾಧಾನಪಡಿಸಿ ಸಭೆ ಆರಂಭಿಸುವಷ್ಟರಲ್ಲಿ ಪರಮೇಶ್ವರ್ ಹೈರಾಣಾದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap