ಮೈಸೂರು :
ಜೆಡಿಎಸ್ ಪಕ್ಷದ ಮಾಜಿ ಸಚಿವ ಸಾರಾ ಮಹೇಶ್ ರವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಸಾ.ರಾ.ಮಹೇಶ್, ಸೆ. 18 ರಂದೇ ರಾಜೀನಾಮೆ ಸಲ್ಲಿಸಿದ್ದೇನೆ. ಮಾನಸಿಕವಾಗಿ ನೊಂದು ರಾಜೀನಾಮೆ ನೀಡಿದ್ದೇನೆ. ಸ್ಪೀಕರ್ ಇಲ್ಲದ ಕಾರಣ ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೆ. ನಂತರ ಸ್ಪೀಕರ್ ಮನವೊಲಿಸಿದರೂ ಕೂಡ ನಾನು ರಾಜೀನಾಮೆ ವಾಪಸ್ ಪಡೆದಿಲ್ಲ ಎಂದು ರಾಜೀನಾಮೆ ನೀಡಿರುವ ಕುರಿತು ಬಹಿರಂಗ ಪಡಿಸಿದ್ದಾರೆ.
ಈ ಮೂಲಕ ಜೆಡಿಎಸ್ ಗೆ ಉಪಚುನಾವಣೆಗೂ ಮುನ್ನವೇ ಸಾ.ರಾ. ಮಹೇಶ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಭಾರಿ ಹಿನ್ನಡೆಯಾಗಿದೆ.
