ಚಿಕ್ಕಬಳ್ಳಾಪುರ:
ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕೇಳೇ ಇಲ್ಲ. ಪುಟಗೋಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಯಾರಿಗೆ ಬೇಕು. ಎಂದು ಕಾಂಗ್ರೆಸ್ ಶಾಸಕ ಸುಧಾಕರ್ ಪರೋಕ್ಷವಾಗಿ ಜೆಡಿಎಸ್ ಪಕ್ಷ ಹಾಗೂ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಶಾಸಕ ಸುಧಾಕರ್, ಪುಟಗೋಸಿ ನಿಗಮ ಮಂಡಳಿ ಸ್ಥಾನ ಯಾರಿಗೆ ಬೇಕು? ಅದನ್ನು ನೀವು ತಪ್ಪಿಸಿರಬಹುದು. ನನ್ನ ಶಾಸಕ ಸ್ಥಾನ ತಪ್ಪಿಸಲು ಸಾಧ್ಯನಾ? ನಿಮ್ಮ ಹಣೆಬರಹದಲ್ಲೂ ಆಗಲ್ಲ. ನಿಮ್ಮ ಕೈಯಲ್ಲೂ ಸಾಧ್ಯವಿಲ್ಲ. ನಾನು ಜೆಡಿಎಸ್ ಅಭ್ಯರ್ಥಿಯನ್ನ ಎರಡು ಬಾರಿ ಸೋಲಿಸಿದ್ದೇನೆ. ಜನರ ಆಶೀರ್ವಾದ ನನಗಿದೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರನ್ನು ಹೊಗಳಿದರೆ ಕೆಲವರಿಗೆ ಉರಿಯುತ್ತೆ. ಸಿದ್ದರಾಮಯ್ಯ ನಮ್ಮ ಸಿಎಂ ಅಂದರೆ ಕೆಲವರು ಮೈ ಪರಚಿಕೊಳ್ತಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಜನರಿಗೆ, ಈ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತನ್ನು ಕೊಟ್ಟಿದ್ದರು. ಈ ಮಾತನ್ನು ಒಂದು ಸಲ ಅಲ್ಲ, ನೂರು ಬಾರಿ ಹೇಳುತ್ತೇನೆ. ನನ್ನ ಇನ್ನೇನು ಮಾಡಲು ಸಾಧ್ಯ..ನನ್ನ ಶಾಸಕ ಸ್ಥಾನ ಕಿತ್ತು ಹಾಕಲಿಕ್ಕೆ ಆಗುತ್ತಾ? ಅದು ನಿಮ್ಮ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ