ರಾಮನಗರ:
ಚುನಾವಣಾ ಕಣದಿಂದ ಮಗ ಹಿಂದಕ್ಕೆ ಸರಿದಿರುವುದು ಅಸಹ್ಯಕರ ತೀರ್ಮಾನ. ಇದರಿಂದ ಹೇಸಿಗೆಯಾಗುತ್ತಿದೆ ಎಂದು ಲಿಂಗಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಗ ಪಕ್ಷಕ್ಕೆ ವಾಪಸ್ ಸೇರಿಕೊಳ್ಳುತ್ತಿದ್ದಾನೆ ಎಂಬುದರ ಕುರಿತು ಅವರು ನನಗೆ ಒಂದು ಮಾತು ಹೇಳಿಲ್ಲ. ಹಾಗೆಯೇ ಅದನ್ನು ನಾನು ಸ್ವಾಗತಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ತಾವು ಅಭ್ಯರ್ಥಿಯಾಗಿದ್ದರೆ ಸ್ಪರ್ಧಾ ಕಣದಿಂದ ಹಿಂದೆ ಸರಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮನೆಯಲ್ಲಿ ನಾನು, ನನ್ನ ಹೆಂಡಿ ಮತ್ತು ಮಗ ಮೂವರು ಕುಳಿತಾಗ ಬಿಜೆಪಿ ಸೇರ್ಪಡೆ ವಿಚಾರವನ್ನು ಆತ ಮುಂದಿಟ್ಟಿದ್ದ. ಬಹಳ ಕಹಿ ಅನುಭವ ಆಗುತ್ತದೆ. ಬಿಲ್ ಕುಲ್ ಬಿಜೆಪಿ ಸೇರಲೇಬೇಡ ಎಂದು ಹೇಳಿದ್ದೆ. ಅದಕ್ಕೆ ಆತ ಒಪ್ಪಿಕೊಂಡಿದ್ದ. ಆದರೆ, ಮರುದಿನ ಟಿವಿಯಲ್ಲಿ ಆತ ಕೈಯಲ್ಲಿ ಬಿಜೆಪಿ ಬಾವುಟ ಹಿಡಿದು, ಅದರ ಶಾಲನ್ನು ಹಾಕಿಕೊಳ್ಳುತ್ತಿರುವ ಸುದ್ದಿ ನೋಡಿದೆ. ಅಂದಿನಿಂದ ಆತನ ಜತೆ ನಾನು ಮಾತನಾಡಿಲ್ಲ. ಬಿಜೆಪಿ ಸೇರುವುದು ಬೇಡ ಎಂದು ಕಿವಿಮಾತು ಹೇಳಿದ್ದರೂ ಮಗ ಕೇಳಲಿಲ್ಲ ಎನ್ನುವುದು ಅವರ ಸಿಟ್ಟಿಗೆ ಕಾರಣವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ