ಮೊಬೈಲ್ ಫೀವರ್ ಕ್ಲಿನಿಕ್ ಬಸ್ ವ್ಯವಸ್ಥೆಗೆ ಚಾಲನೆ

ಬೆಂಗಳೂರು:

        ಗೃಹ ಕಛೇರಿ ಕೃಷ್ಣಾದಲ್ಲಿ ಇಂದು ಕೋವಿಡ್ – 19 ಸಂಚಾರಿ ಫೀವರ್ ಕ್ಲಿನಿಕ್‍ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು.

      ಬಸ್ ಕ್ಲಿನಿಕ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಬಿಎಸ್‌ವೈ, ‘ಮೊಬೈಲ್ ಫೀವರ್ ಕ್ಲಿನಿಕ್ ಅನ್ನು ನಾಲ್ಕು ವಿಭಾಗಗಳಲ್ಲಿ ತೆರೆಯಲಾಗಿದೆ. ಬೆಂಗಳೂರಿನಲ್ಲಿ ನಾಲ್ಕು ಬಸ್ ವ್ಯವಸ್ಥೆ ಮಾಡಲಾಗಿದೆ. ಮೈಸೂರು, ಮಂಡ್ಯ, ರಾಯಚೂರು, ಮಂಗಳೂರು, ಹುಬ್ಬಳ್ಳಿ, ಬಾಗಲಕೋಟೆಯಲ್ಲೂ ಮೊಬೈಲ್ ಫೀವರ್ ಕ್ಲಿನಿಕ್ ಇದೆ. ರೋಗ ಲಕ್ಷಣಗಳು ಇರುವವರು ಬಂದು ಈ ಬಸ್ನಲ್ಲಿ ತಪಾಸಣೆ ನಡೆಸಿಕೊಳ್ಳಬಹುದು. ಬೆಂಗಳೂರು ನಗರದ್ಯಾಂತ ಈ ಬಸ್ ಗಳು ಸಂಚಾರ ನಡೆಸಲಿವೆ’ ಎಂದು ಮಾಹಿತಿ ನೀಡಿದ್ದಾರೆ.

      ಕೊರೋನಾ ರೋಗ ಲಕ್ಷಣ ಇರುವವರನ್ನು ಆ ಸ್ಥಳಕ್ಕೆ ಆಗಮಿಸಿ ಪರೀಕ್ಷೆ ನಡೆಸುವ ಸಲುವಾಗಿ ಮತ್ತು ಈ ಬಸ್‌ನಲ್ಲೇ ಕ್ವಾರಂಟೈನ್‌ಗೆ ಒಳಪಡಿಸುವ ಸಲುವಾಗಿ ಹೌಸ್ ಜಾಯ್ ಕೇರ್ ಸಂಸ್ಥೆ ಸಹಯೋಗದಲ್ಲಿ ಈ ಬಸ್ ಅನ್ನು ಸಿದ್ದಪಡಿಸಲಾಗಿದೆ.

       ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಹೌಸ್ ಜಾಯ್ ಸಂಸ್ಥೆಯ ಸಂಚಿತ್ ಗೌರವ್ ಮತ್ತು ಎಸ್.ಆರ್.ಎಲ್ ಡೈಗನೊಸ್ಟಿಕ್ಸ್ ನ ಮೊಹಮದ್ ನಿಯಮತುಲ್ಲಾ, ಡಾ. ಕುನಾಲ್ ಶರ್ಮಾ, ಹಾಗೂ ACT ಕೋವಿಡ್ ಫಂಡ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link