ಗಂಡನ ಮೇಲಿನ ಕೋಪಕ್ಕೆ 16 ತಿಂಗಳ ಹಸುಗೂಸನ್ನೇ ಕೊಂದ ತಾಯಿ!!

ಕೊಪ್ಪಳ:

      ಮಹಿಳೆಯೊಬ್ಬರು ತಮ್ಮ 16 ತಿಂಗಳ ಮಗುವನ್ನು ಹತ್ಯೆಮಾಡಿದ ದುರ್ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗ್ರಾಮ ಸೋಮನಾಳ ಗ್ರಾಮದಲ್ಲಿ ನಡೆದಿದೆ.

      ಪ್ರತಿಮಾ(24) ಎಂಬ ಮಹಿಳೆಯೇ 16 ತಿಂಗಳ ಮಗ ಅಭಿನವನನ್ನು ಉಸಿರುಗಟ್ಟಿಸಿ ಸಾಯಿಸಿದ ತಾಯಿ.

      ಪೆಟ್ರೋಲ್ ಬಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಮಾ ಗಂಡ ಶಶಿ ದುಡಿದ ಹಣವನ್ನು ಮನೆಗೆ ಕೊಡುತ್ತಿರಲಿಲ್ಲ. ಇದರಿಂದ ಬೇಸತ್ತಿದ್ದ ಮಹಿಳೆ ಎರಡು ಮೂರು ಸಲ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಿದ್ದಳು. ಆದರೆ, ಸೋಮವಾರ ಗಂಡ ಪೆಟ್ರೋಲ್ ಬಂಕ್​ಗೆ ಕೆಲಸಕ್ಕೆಂದು ತೆರಳಿದ್ದ ವೇಳೆ ತನ್ನದೇ ಹಸುಗೂಸನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅಲ್ಲದೆ, ಬೆಳಗ್ಗೆಯೇ ಕೊಲೆ ಮಾಡಿದ್ದರೂ ಮಗು ಮೃತಪಟ್ಟಿರುವ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎನ್ನಲಾಗಿದೆ.

      ಇನ್ನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಳೆ ಎಂದು ಮಗುವಿನ ತಂದೆ ಶಶಿಧರ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

       ತಾಯಿ ಪ್ರತಿಮಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ