ಹಾಸನ:
ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ತಾಯಿ ಹಾಗೂ ಮಗ – ಮಗಳು ಸ್ಥಳದಲ್ಲೇ ಸಾವನ್ನಪಿರುವ ದುರ್ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ.
ಅಗಸರಹಳ್ಳಿ ಗ್ರಾಮದ ನಿವಾಸಿಗಳಾದ ತಾಯಿ ಭಾಗ್ಯಮ್ಮ(48),ದಾಕ್ಷಾಯಿಣಿ(30),ದಯಾನಂದ(23) ಒಂದೇ ಕುಟುಂಬದ ಮೃತಪಟ್ಟ ದುದೈ೯ವಿಗಳು.
ಇಂದು ಬೆಳಿಗ್ಗೆ ಬಟ್ಟೆ ತೊಳೆದ ದಾಕ್ಷಿಯಿಣಿ ಒಣಹಾಕಲು ಹೋಗಿದ್ದ ಸಮಯದಲ್ಲಿ ಮನೆ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಾಗ ರಕ್ಷಣೆಗೆ ಹೋದ ತಾಯಿ ಮಗ ಸಹ ಈ ಅವಘಡದಲ್ಲಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣ ವಿದ್ಯುತ್ ಮಂಡಲಿ ಹಾಗೂ ಚನ್ನರಾಯಪಟ್ಟಣ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ