ಬೆಂಗಳೂರು :
ಚುನಾವಣೆಯಲ್ಲಿ ಸೋತ ಬಳಿಕ ಪದೇ ಪದೇ ಸಿಎಂ ಭೇಟಿ ಮಾಡ್ತಿರೋ ಎಂಟಿಬಿ ನಾಗರಾಜು ತಮ್ಮ ಮುಂದಿನ ರಾಜಕೀಯ ಸ್ಥಾನಮಾನಗಳ ಕುರಿತಂತೆ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಗೆ ಎಂಟಿಬಿ ನಾಗರಾಜ್ ಆಗಮಿಸಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ಪಕ್ಷದಲ್ಲಿ ಮುಂದಿನ ಭವಿಷ್ಯ ಕುರಿತು ಆತಂಕಗೊಂಡಿರುವ ಎಂಟಿಬಿ ನಾಗರಾಜ್, ಸಚಿವ ಸಂಪುಟ ವಿಸ್ತರಣೆ ವಿಳಂಬದಿಂದ ಕಂಗಾಲಗಾಗಿರುವ ಹಾಗಿದೆ. ಹಾಲಿ ಶಾಸಕರೇ ಗೆದ್ದು ಇಷ್ಟು ದಿನಗಳಾದರೂ ಇನ್ನು ಸಚಿವರಾಗಿಲ್ಲ, ಇನ್ನು ಸೋತಿರುವ ತಮ್ಮ ಪಾಡೇನು ಎಂಬ ಆತಂಕದಲ್ಲಿದ್ದಾರೆ ಎನ್ನಲಾಗಿದೆ.
ಸದ್ಯ ಅನರ್ಹ ಶಾಸಕರಾಗಿರುವ ಎಂಟಿಬಿಗೆ ಎದುರಿಗಿರುವ ಕಾನೂನು ತೊಡಕುಗಳ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಸಂಪುಟ ಸೇರಲು ಎಂಟಿಬಿ ತಮ್ಮ ಕಸರತ್ತು ಮುಂದುವರಿಸಿದ್ದಾರೆ.
ಇದೇ ವೇಳೆ ಸಿಎಂ ಭೇಟಿ ಮತ್ತು ಚರ್ಚೆ ಬಳಿಕ ಯಾರ ಬಳಿಯೂ ಮಾತನಾಡದೆ ಎಂಟಿಬಿ ನಾಗರಾಜ್ ಹೊರಟರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
