ವಿಜಯನಗರ : ಕೋರ್ಟ್ ಆವರಣದಲ್ಲೇ ವಕೀಲರ ಬರ್ಬರ ಹತ್ಯೆ!!

ವಿಜಯನಗರ : 

      ನ್ಯಾಯಾಲಯದ ಆವರಣದಲ್ಲೇ ಕಾಂಗ್ರೆಸ್ ಮುಖಂಡರೂ ಆಗಿರುವ ವಕೀಲರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

      ಡಾ.ತಾರಿಹಳ್ಳಿ ವೆಂಕಟೇಶ್ (48) ಕೊಲೆಯಾದ ದುರ್ದೈವಿ. ಕೋರ್ಟ್ ಆವರಣದಲ್ಲೇ ವೆಂಕಟೇಶ್ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.                                           

      ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ ಎನ್ನಲಾಗಿದೆ. ಪ್ರಕರಣ ಸಂಬಂಧ ಹೊಸಪೇಟೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಬಂಧಿತನನ್ನು ಮನೋಜ್ ಎಂದು ಗುರುತಿಸಲಾಗಿದೆ.                   

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap