ಬೆಂಗಳೂರು :
ಪಾಗಲ್ ಪ್ರೇಮಿಯಿಂದ ಪ್ರಿಯತಮೆಯ ಬರ್ಬರ ಕೊಲೆ ನಡೆರುವ ಘಟನೆ ಗಿರಿನಗರದ ದ್ವಾರಕ ನಗರ ಸೇಂಟ್ ಪೀಟರ್ಸ್ ಶಾಲೆ ಬಳಿ ತಡರಾತ್ರಿ ನಡೆದಿದೆ.
ಪ್ರಕಾಶ ನಗರದ 19 ವರ್ಷದ ಯುವತಿಯೊಬ್ಬಳು ರಾಜಾಜಿನಗರದ ರೌಡಿಶೀಟರ್ ಅಭಿಗೌಡ ಎಂಬಾತನನ್ನು ಪ್ರೀತಿಸುತ್ತಿದ್ದಳು.
ಪ್ರಕಾಶನಗರದಲ್ಲೇ ಯುವತಿಯ ಪಾಲಕರೂ ವಾಸಿಸುತ್ತಿದ್ದು, ಒಂದೇ ಏರಿಯಾದಲ್ಲಿ ವಾಸವಾಗಿದ್ದರಿಂದ ಆಕೆಗೆ ಮುನಿರಾಜು ಪರಿಚಯವಿತ್ತು. 3 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಮುನಿರಾಜು ನಡವಳಿಕೆಯಿಂದ ಬೇಸತ್ತಿದ್ದ ಯುವತಿ, ಆತನಿಂದ ದೂರವಾಗಲು ಮುಂದಾಗಿದ್ದಳು. ಇದರಿಂದ ಕುಪಿತಗೊಂಡಿದ್ದ ಆತ, ಆಕೆಯ ಮನವೊಲೈಕೆಗೆ ಯತ್ನಿಸಿದ್ದ.
ಸೋಮವಾರ ಸಂಜೆ ಅಭಿಗೌಡ ಯುವತಿಗೆ ಫೊನ್ ಮಾಡಿ ತನ್ನನ್ನ್ನು ಭೇಟಿ ಮಾಡುವಂತೆ ಹೇಳಿದ್ದಾನೆ. ಅದರಂತೆ ತನ್ನ ಬಳಿ ಬಂದ ಯುವತಿಯನ್ನು ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿ ಒಂದು ಕೈನಲ್ಲಿ ಚಾಕು ಹಿಡಿದು ಇನ್ನೊಂದು ಕೈನಲ್ಲಿ ತಾಳಿ ಹಿಡಿದು ತನ್ನನ್ನು ಮದುವೆಯಾಗುವಂತೆ ಅಭಿ ಗೌಡ ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಆತ ಆಕೆಯನ್ನು ಕೊಲೆ ಮಾಡಿದ್ದಾನೆ.
ಈ ಘಟನೆ ಬಳಿಕ ಸ್ವತಃ ತಾನೇ ರಾಜಾಜಿನಗರ ಪೊಲೀಸ್ ಠಾಣೆಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ರಾಜಾಜಿನಗರ ಪೊಲೀಸರು ಆತನನ್ನು ಗಿರಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ