ಮೈಸೂರು:
ಸ್ಯಾಂಡಲ್ ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಬುಧವಾರ ರಾತ್ರಿ ಲಘು ಹೃದಯಾಘಾತವಾಗಿದೆ.
ಮೈಸೂರಿನ ಬೋಗಾದಿ ರಸ್ತೆಯ ಬಳಿ ಅವರು ಐಶಾರಾಮಿ ವಿಲ್ಲಾವೊಂದನ್ನು ಖರೀದಿಸಿದ್ದರು. ಬಿಡುವಿನ ಸಮಯದಲ್ಲಿ ಅವರು ತಮ್ಮ ವಿಲ್ಲಾದಲ್ಲಿ ತಂಗುತ್ತಿದ್ದರು. ವಿಶ್ರಾಂತಿ ಪಡೆಯುತ್ತಿದ್ದ ಅರ್ಜುನ್ ಜನ್ಯಾರಿಗೆ ನಿನ್ನೆ ಮಧ್ಯರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯರು ತಪಾಸಣೆಗೆ ಒಳಪಡಿಸಿದಾಗ, ಅವರಿಗೆ ಲಘುವಾಗಿ ಹೃದಯಾಘಾತವಾಗಿರುವುದು ತಿಳಿದು ಬಂದಿದ್ದು, ಮಂಗಳವಾರ ರಾತ್ರಿ ಮತ್ತೆ ಅವರಿಗೆ ಬೆನ್ನು, ಎದೆ ಹಾಗೂ ತಲೆ ನೋವು ಜಾಸ್ತಿಯಾಗಿತ್ತು ಹಾಗಾಗಿ ಮತ್ತೆ ಇಸಿಜಿ ಮಾಡಿದ್ದೇವೆ. ಬಳಿಕ ಇಸಿಜಿಯಲ್ಲಿ ಬಹಳ ವ್ಯತ್ಯಾಸ ಕಂಡಿದ್ದರಿಂದ ತಕ್ಷಣ ಆಂಜಿಯೋಗ್ರಾಂ ಪರೀಕ್ಷೆ ಮಾಡಿದಾಗಲೇ ಶೆ.99% ಹಾರ್ಟ್ ಬ್ಲಾಕೇಜ್ ಆಗಿದೆ ಎಂಬುದು ತಿಳಿಯಿತು. ತಕ್ಷಣ ಅವರ ಕುಟುಂಬಸ್ಥರ ಜೊತೆ ಮಾತನಾಡಿ ಆಂಜಿಯೋಫಾಸ್ಟಿ ಮಾಡಲಾಯಿತು. ಚಿಕಿತ್ಸೆ ಬಳಿಕ ಅವರು ಸಂಪೂರ್ಣ ನಿರಾಳರಾದರು ಎಂದು ಅಪೋಲೋ ವೈದ್ಯರು ಮಾಹಿತಿ ನೀಡಿದ್ದಾರೆ.
ಜನ್ಯ ಅವರನ್ನು ಸರಿಯಾದ ಸಮಯಕ್ಕೆ ಚಿಕಿತ್ಸೆಗೆ ದಾಖಾಲಗಿದ್ದರಿಂದ ಸೇಫ್ ಆಗಿದ್ದಾರೆ. ಎರಡು ಗಂಟೆ ತಡವಾಗಿದ್ರೂ ಕೆಟ್ಟ ಪರಿಣಾಮ ಬೀರುತಿತ್ತು ಎಂದೂ ಸಹ ವೈದ್ಯರು ತಿಳಿಸಿದ್ದಾರೆ.
ಸದ್ಯ ಅರ್ಜುನ್ ಜನ್ಯ ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ