ಮೈಸೂರು:
ಕಾರು ಅಪಘಾತದಿಂದ ಸೆಪ್ಟೆಂಬರ್ 23 ರಂದು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಯಿಂದ ಹೊರಬಂದ ದರ್ಶನ್ ಗೆಲುವಾಗಿದ್ದರು. ತಮಗಾಗಿ ಕಾಯುತಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಿನಲ್ಲಿ ಎಷ್ಟು ಜನ ಇದ್ದರು ಎಂಬ ಸಂದೇಹಕ್ಕೆ ಉತ್ತರ ನೀಡಿದ ಅವರು, ನನ್ನ ಕಾರಿನಲ್ಲಿ ಐದು ಜನ ಮಾತ್ರವೇ ಕೂರಲು ಸಾಧ್ಯ. ಅಷ್ಟೆ ಜನರೇ ಅಂದೂ ಕಾರಿನಲ್ಲಿದ್ದರು. ಊಟ ಮಾಡಿಕೊಂಡು ವಾಪಸ್ಸು ಬರುವಾಗ ತಿರುವಿನಲ್ಲಿ ಸಂಭವಿಸಿದ ಸಣ್ಣ ಅಪಘಾತವಷ್ಟೆ ಅದು ಎಂದು ಅವರು ಸ್ಪಷ್ಟನೆ ನೀಡಿದರು.
ಇನ್ನು ದರ್ಶನ್ ಅವರ ಬಲಗೈಗೆ ಬ್ಯಾಂಡೆಜ್ ಹಾಕಲಾಗಿದ್ದು, ಇನ್ನು ಕೆಲವು ದಿನಗಳ ವಿಶ್ರಾಂತಿ ಅವರಿಗೆ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದರು. ಕೆಲವು ದಿನಗಳ ನಂತರ ಮಾಮೂಲಿಯಾಗಿ ಜಿಮ್ ಸೇರಿದಂತೆ ಇನ್ನಿತರೆ ದೈನಂದಿನ ಕಾರ್ಯದಲ್ಲಿ ಅವರು ತೊಡಗಿಕೊಳ್ಳಬಹುದು ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
