ಆಟವಾಡುತ್ತ 5 ರೂ. ನಾಣ್ಯ ನುಂಗಿದ ಬಾಲಕಿ ದುರಂತ ಅಂತ್ಯ!!

ಮೈಸೂರು :

     ಆಟವಾಡುವಾಗ ಆಕಸ್ಮಿಕವಾಗಿ 5 ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಆಯರಹಳ್ಳಿಯಲ್ಲಿ ನಡೆದಿದೆ.

     4 ವರ್ಷದ ಖುಷಿ ಮೃತ ಬಾಲಕಿ. ಖುಷಿ ತನ್ನ ಅಜ್ಜಿಯ ಮನೆ ಹಿರಿಕ್ಯಾತನಹಳ್ಳಿಯಲ್ಲಿ ಆಟವಾಡುತ್ತಿದ್ದ ವೇಳೆ 5 ರೂಪಾಯಿ ನಾಣ್ಯವನ್ನು ಬಾಯಿಗೆ ಹಾಕಿಕೊಂಡಿದ್ದಾಳೆ. ಆಕಸ್ಮಿಕವಾಗಿ ನಾಣ್ಯ ನುಂಗಿದ್ದು, ವಿಷಯ ತಿಳಿಯುತ್ತಿದ್ದಂತೆ ಮನೆಯವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಣ್ಯ ಹೊರತೆಗೆಯುವುದು ಸಾಧ್ಯವಾಗಿಲ್ಲ.

     ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap