ಮೈಸೂರು :
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಅಡ್ಡಗಟ್ಟಿದ ಕಿಡಿಗೇಡಿಯೊಬ್ಬ, ಅರಿಶಿಣ ಕೊಂಬು ಕಟ್ಟಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.
ಶಾಲೆ ಮುಗಿಸಿಕೊಂಡು ಮನೆಗೆ ತನ್ನ ಸ್ನೇಹಿತೆ ಜೊತೆ ಮನೆಗೆ ಹೋಗುತ್ತಿರುವಾಗ ಇಬ್ಬರು ಯುವಕರು ಅಡ್ಡಗಟ್ಟಿದ್ದಾರೆ. ಬಳಿಕ ಒಬ್ಬಾತ ಬಾಲಕಿಯನ್ನು ಹಿಡಿದುಕೊಂಡಿದ್ದರೆ ಮತ್ತೊಬ್ಬ ಬಲವಂತವಾಗಿ ಅರಿಶಿಣ ಕೊಂಬು ಕಟ್ಟಿದ್ದು, ನಾನು ನಿನ್ನ ಮದುವೆಯಾಗಿದ್ದೇನೆ ಈ ವಿಷಯವನ್ನು ಮನೆಯಲ್ಲಿ ಹೇಳಿದರೆ ಕೊಂದು ಹಾಕುತ್ತೇನೆ ಎಂದು ಬಾಲಕಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.
ಮನೆಗೆ ಬಂದು ಬಾಲಕಿ ಪೋಷಕರಿಗೆ ಈ ವಿಷಯ ತಿಳಿಸಿದ್ದು, ಬಾಲಕಿಯ ತಂದೆ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವಕ ಪರಾರಿಯಾಗಿದ್ದು, ಬೆಟ್ಟದಪುರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ