ಮೈಸೂರು :
ತೃತೀಯ ಲಿಂಗಿಯಾಗಿ ಎಲ್ ಎಲ್ ಬಿ ಪದವಿಯನ್ನು ಮೊದಲ ಬಾರಿಗೆ ಮುಗಿಸುವ ಮೂಲಕ, ರಾಜ್ಯದಲ್ಲೇ ಮೊದಲ ತೃತೀಯ ಲಿಂಗಿ ಲಾಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮೈಸೂರಿನ ಜಯನಗರದ ನಿವಾಸಿ ಸಿ.ಶಶಿ ನಗರದ ವಿದ್ಯಾವರ್ಧಕ ಕಾಲೇಜಿನಲ್ಲಿ 3 ವರ್ಷದ ಎಲ್ಎಲ್ಬಿ ಕೋರ್ಸ್ ಮುಗಿಸಿ ಇದೀಗ ವಕೀಲೆಯಾಗಿರುವ ತೃತೀಯ ಲಿಂಗಿ.
ಈ ಕುರಿತಂತೆ ಪ್ರತಿಕ್ರಿಯಿಸಿರುವಂತ ಅವರು, 10ನೇ ತರಗತಿ ಓದುತ್ತಿರುವಾಗಲೇ ದೇಹದಲ್ಲಿ ಬದಲಾವಣೆಯಾಗಿ ತೃತೀಯ ಲಿಂಗಿಯಾದೆ. ಆ ಬಳಿಕ ತುಂಬಾ ನೋವು, ಅಪಮಾನ, ನಿಂದನೆ ಕಿರುಕುಳ ಅನುಭವಿಸಿದೆ. ನಾನು ಅನುಭವಿಸಿದ ಕಷ್ಟಗಳನ್ನು ತೃತೀಯ ಲಿಂಗಿಗಳು ಅನುಭವಿಸಬಾರದು, ಅವರ ಕಷ್ಟಗಳಿಗೆ ನಾನು ಧ್ವನಿಯಾಗಬೇಕು ಎಂಬ ಉದ್ದೇಶದಿಂದ ಮುಂದೆ ನಡೆಯುತ್ತೇನೆ. ನ್ಯಾಯಾಧೀಶೆಯಾಗಬೇಕೆಂಬುದು ನನ್ನ ಆಸೆ ಎಂದು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಅವರು ಸ್ನೇಹಿತರು ಮಾಡಿದ ಆರ್ಥಿಕ ಸಹಾಯದಿಂದ ಪದವಿ ಮುಗಿಸಿದ್ದೇನೆ. ಎಲ್ ಎಲ್ ಬಿ ಮುಗಿಸಲು ಸಹಾಯ ಮಾಡಿದ ಎಲ್ಲಾ ಉಪನ್ಯಾಸಕರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ