ಮೈಸೂರು:
ಜಂಬೂ ಸವಾರಿ ಚಾಲನೆಗೆ ಹಸಿರು ಶಾಲು ಹೊದ್ದು, ರೈತ ಪರ ನಿಲುವು ಪ್ರದರ್ಶಿಸಿದ ಕುಮಾರಸ್ವಾಮಿ ನಂದಿ ಧ್ವಜವನ್ನು ಉದ್ಘಾಟನೆ ಮಾಡಿದ್ದು, ಕೆಲವು ಸಚಿವರು ಹಾಗೂ ಮಹರಾಜ ಯಧುವೀರ ಅವರು ಜಂಬೂ ಸವಾರಿಯಲ್ಲಿ ಇರಲಿದ್ದಾರೆ.
ಅಂಬಾರಿ ಹೊತ್ತ ಅರ್ಜುನ ರಾಜಠೀವಿಯಿಂದ ಹೆಜ್ಜೆ ಹಾಕುತಿದ್ದಾನೆ. ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ವಿರಾಜಮಾನಳಾಗಿದ್ದು, ರಾಜಬೀದಿಯ ಇಕ್ಕೆಲಗಳಲ್ಲಿ ನಿಂತಿರುವ ಸಹಸ್ರಾರು ಸಂಖ್ಯೆಯ ಜನ ಅಭೂತಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡು ಪುನೀತರಾಗುತ್ತಿದ್ದಾರೆ.
ಕಲಾತಂಡಗಳು, ಜನಪದ ತಂಡಗಳು, ಕುಂಭ ಹತಹೊತ್ತ ಮಹಿಳೆಯರು ಜಂಬೂ ಸವಾರಿಯ ಜೊತೆ ಸಾಗಲಿದ್ದು, ಕರ್ನಾಟಕದ ಇತಿಹಾಸ, ಸಂಸ್ಕೃತಿ ಬಿಂಬಿಸುವ 42 ಸ್ಥಬ್ದ ಚಿತ್ರಗಳು ಜನರ ಕಣ್ಣುಗಳನ್ನು ತಣಿಸಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ