ಸೋಶಿಯಲ್ ಮೀಡಿಯಾದಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ದ ಆರೋಪಿ ಅಂದರ್!!

ಮೈಸೂರು : 

      ಕೊರೋನಾವೈರಸ್ ಕುರಿತು ಸಾಮಾಜಿಕ ತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದ ವ್ಯಕ್ತಿಯನ್ನು ಮೈಸೂರು ಪೋಲೀಸರು ಬಂಧಿಸಿದ್ದಾರೆ.

      ನಂಜನಗೂಡಿನ ಪ್ರಜ್ವಲ್ ಕಶ್ಯಪ್ ಬಂಧಿತ ಆರೋಪಿ. ಈತ ನಂಜನಗೂಡು ನಗರದ ಶಂಕರಪುರ, ತ್ಯಾಗರಾಜ ಕಾಲನಿ, ಸರಸ್ವತಿ ಕಾಲನಿ ಮತ್ತು ಬಸವನಗುಡಿ ಬಡಾವಣೆಗಳ ಐದು ಮಂದಿಗೆ ಕೊರೋನ ಸೋಂಕು ತಗುಲಿದೆ ಎಂದು ಸುಳ್ಳು ಸುದ್ದಿಯನ್ನು ಫೇಸ್ ಬುಕ್ ಪೋಸ್ಟ್ ಮಾಡಿದ್ದ. ಇದರಿಂದ ಕಾರ್ಖಾನೆಗೆಂದು ಕೆಲಸಕ್ಕೆ ತೆರಳಿದ್ದ ಈ ಬಡಾವಣೆಯ ಕಾರ್ಮಿಕರನ್ನು ಕೆಲಸದಿಂದ ಹಿಂದಕ್ಕೆ ಕಳುಹಿಸಲಾಗಿತ್ತು. ಆತಂಕಕ್ಕೊಳಗಾದ ಕಾರ್ಮಿಕರು ದಲಿತ ಸಂಘರ್ಷ ಸಮಿತಿ ಮೊರೆ ಹೋಗಿದ್ದರು.

     ಮಹಾರಾಷ್ಟ್ರದಿಂದ ಆಗಮಿಸಿದ್ದ ಐವರಲ್ಲಿ ಕೊರೋನಾ ಸೋಂಕಿದೆ ಎಂದು ದೃಢವಾಗಿತ್ತಾದರೂ ಅವರಾರೂ ನಂಜನಗೂಡಿಗೆ ಆಗಮಿಸಿರಲಿಲ್ಲ. ಆದರೆ ಆರೋಪಿ ನಂಜನಗೂಡಿನ 4 ಬಡಾವಣೆಗಳ ಹೆಸರನ್ನು ಉಲ್ಲೇಖಿಸಿ ಇಲ್ಲಿನ ಐವರಿಗೆ ಕೊರೋನಾ ಇದೆ ಎಂದು ಸುದ್ದಿ ಹಾಕಿದ್ದ. 

      ದಸಂಸ ಮುಖಂಡರು ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap