ಮೈಸೂರು:
ಅಮೆರಿಕದ ಸ್ಯಾನ್ ಬರ್ನಾರ್ಡಿನೊದಲ್ಲಿ ಮೈಸೂರಿನ ಯುವಕ ಅಭಿಷೇಕ್ ಸುದೇಶ್ ಭಟ್ ಅವರನ್ನು ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಎರಿಕ್ ಟರ್ನರ್ ಎಂದು ಗುರುತಿಸಲಾಗಿದ್ದು, ಅಮೆರಿಕದ ಪ್ರಜೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಆರೋಪಿಯು ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿಲ್ಲ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಬಂಧನ ನಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಲ್ಲಿನ ಪೊಲೀಸರು ದೂರವಾಣಿ ಮೂಲಕ ತಿಳಿಸಿರುವುದಾಗಿ ಹೇಳಿದ್ದಾರೆ. ಆದರೆ, ಆರೋಪಿಯು ಸ್ಯಾನ್ ಬರ್ನಾರ್ಡಿನೊ ಪಟ್ಟಣದ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಅಭಿಷೇಕ್‌ಗೆ ಟರ್ನರ್ ಏಕೆ ಗುಂಡು ಹಾರಿಸಿದ್ದಾನೆ. ಹತ್ಯೆಯ ಹಿಂದಿನ ಕಾರಣ ಏನೆಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಸ್ಯಾನ್ ಬರ್ನಾರ್ಡಿನೊ ಪೊಲೀಸ್ ಇಲಾಖೆ ತಿಳಿಸಿದೆ.
ಜಾಮೀನುರಹಿತವಾಗಿ ಬಂಧನದಲ್ಲಿರುವ ಟರ್ನರ್‌ರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸ್ಯಾನ್ ಬರ್ನಾರ್ಡಿನೊ ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
