ಬೆಂಗಳೂರು:
ಕೊರೊನಾ ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ‘ನಮ್ಮ ಮೆಟ್ರೋ’ ಸೆಪ್ಟೆಂಬರ್ 7ರಿಂದ ಕಾರ್ಯ ನಿರ್ವಹಣೆ ಆರಂಭಿಸಲಿದೆ.
ರೈಲಿನಲ್ಲಿ ಪ್ರಯಾಣಿಸುವವರು ಸ್ಮಾರ್ಟ್ ಕಾರ್ಡ್ ಬಳಸಬೇಕಾಗುತ್ತದೆ. ಏಕೆಂದರೆ ಟೋಕನ್ ಮಾರಾಟ ಮಾಡುವುದಿಲ್ಲ. ಇನ್ನು ಎಲ್ಲ ಮೆಟ್ರೋ ಆವರಣದಲ್ಲಿ ಕಡ್ಡಾಯವಾಗಿ ಫೇಸ್ ಮಾಸ್ಕ್ ಬಳಸಿರಬೇಕು.
ಇನ್ನು 2 ಮೀಟರ್ ಗಳ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ. ಒಂದು ಪಾಯಿಂಟ್ ನಿಂದ ಮತ್ತೊಂದಕ್ಕೆ ಗರಿಷ್ಠ ನಾನೂರು ಪ್ರಯಾಣಿಕರು ಪ್ರಯಾಣಿಸಲು ಮಾತ್ರ ಅವಕಾಶ ಇದೆ. ಕೊರೊನಾ ಇರುವುದರಿಂದ ಒಂದು ಸೀಟಿನ ಪಕ್ಕ ಮತ್ತೊಂದು ಖಾಲಿ ಬಿಡಬೇಕಾಗುತ್ತದೆ.
ಇನ್ನು ಸೆಪ್ಟಂಬರ್ 11ರಿಂದ ಮೆಟ್ರೋ ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದ್ದು, ಬೆಳಿಗ್ಗೆ 7ರಿಂದ ರಾತ್ರಿ 10 ಗಂಟೆವರೆಗೆ ಸಂಚಾರ ನಡೆಸಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪೀಕ್ ಅವರ್ ನಲ್ಲಿ ಪ್ರತಿ ಐದು ನಿಮಿಷಕ್ಕೆ ಒಂದರಂತೆ ಹಾಗೂ ಪೀಕ್ ಅವರ್ ಹೊರತುಪಡಿಸಿದ ಸಮಯದಲ್ಲಿ ಪ್ರತಿ ಹತ್ತು ನಿಮಿಷಕ್ಕೊಮ್ಮೆ ರೈಲು ಸಂಚಾರ ಇರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
