ಬೆಂಗಳೂರು:
ಸಿಲಿಕಾನ್ ಸಿಟಿ ಜನರ ನೆಚ್ಚಿನ “ನಮ್ಮ ಮೆಟ್ರೋ” ಇನ್ನು ಮೇಲೆ ಡಬಲ್ ಡೆಕ್ಕರ್ ಟ್ರ್ಯಾಕ್ ಆಗಿ ಸಂಚಾರ ಸೇವೆ ನೀಡಲಿದೆ.
ಜಯದೇವ ಆಸ್ಪತ್ರೆ ಮುಂಭಾಗ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಲಘು ವಾಹನ, ಕಾರು ಬೈಕುಗಳು ಸಂಚರಿಸುವ ಡಬಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ರೋಡ್ ಲೈನ್ ನಿರ್ಮಿಸಲಾಗಿದೆ.
ಅದೇ ಮಾದರಿಯಲ್ಲಿ ರಾಗಿಗುಡ್ಡ ಸ್ಟೇಷನ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಮೂರು ಕಿಲೋಮೀಟರ್ ಡಬಲ್ ಡೆಕ್ಕರ್ ಟ್ರ್ಯಾಕ್ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ಜಯದೇವ ಆಸ್ಪತ್ರೆ ಮುಂಭಾಗ ಕಾಮಗಾರಿ ಭರದಿಂದ ಸಾಗಿದೆ.
ಮೆಟ್ರೋ ಪಿಲ್ಲರ್ ಗಳನ್ನೇ ಉಪಯೋಗಿಸಿಕೊಂಡು ಡಬಲ್ ಡೆಕ್ಕರ್ ಟ್ರ್ಯಾಕ್ ಗಳನ್ನು ನಿರ್ಮಿಸಿ, ಕೆಳಗಿನ ಟ್ರ್ಯಾಕ್ ಅನ್ನು ವಾಹನಗಳ ಸಂಚಾರಕ್ಕೆ ಮತ್ತು ಮೇಲಿನ ಟ್ರ್ಯಾಕ್ ಅನ್ನು ಮೆಟ್ರೋ ಸಚಾರಕ್ಕೆ ಬಳಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ಕಾರು, ಬೈಕು ಸೇರಿ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು.
ನಿಗದಿತ ಅಂತರದಲ್ಲಿ ಮತ್ತೊಂದು ಪಿಲ್ಲರ್ ಅಳವಡಿಸಿ ಮೆಟ್ರೋ ಲೈನ್ ನಿರ್ಮಾಣ ಮಾಡಲಾಗುವುದು. ಎಲಿವೇಟೆಡ್ ಟ್ರ್ಯಾಕ್ ನಿರ್ಮಾಣ ಮಾಡಲಿದ್ದು ಒಂದೇ ಖರ್ಚಿನಲ್ಲಿ 2 ಮಾರ್ಗ ನಿರ್ಮಾಣವಾಗಲಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ ಡಬಲ್ ಡೆಕ್ಕ್ ಟ್ರ್ಯಾಕ್ ಗಳು 2021 ಅಕ್ಟೋಬರ್ ತಿಂಗಳಿನಲ್ಲಿ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿವೆ.
ಬೆಂಗಳೂರಿನ ಪ್ರಯಾಣಿಕರ ಮೆಚ್ಚಿನ “ನಮ್ಮ ಮೆಟ್ರೋ” ಇನ್ನು ಮೇಲೆ ಡಬಲ್ ಡೆಕ್ಕರ್ ಟ್ರ್ಯಾಕ್ ಆಗಿ ಸಂಚಾರ ಸೇವೆಯನ್ನು ನೀಡಲಿದ್ದು, ಈ ಮೂಲಕ ಸಿಲಿಕಾನ್ ಬೆಂಗಳೂರಿಗೆ ಮತ್ತೊಂದು ಗರಿ ಸೇರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ