ಮಂಗಳೂರು:
ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ಕಾಸರಗೋಡು ಜಿಲ್ಲೆಯ ನಾಲ್ವರು ಆರೋಪಿಗಳನ್ನು ನಗರದ ತೊಕ್ಕೊಟ್ಟು ಬಳಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ .
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ, ‘ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಕೊಡ್ಲಮೊಗರು ಬಳಿಯ ಮಜಿರ್‌ಪಳ್ಳ ಧರ್ಮನಗರ ನಿವಾಸಿ ಅಬೂಬಕ್ಕರ್ ಸಮದ್ ಅಲಿಯಾಸ್ ಸಮದ್ (24), ಕಡಂಬಾರು ಸಮೀಪದ ವರ್ಕಾಡಿ ನಿವಾಸಿ ಮಹಮ್ಮದ್ ಅಸ್ರಫ್ ಅಲಿಯಾಸ್ ಅಶ್ರಫ್ (30), ಕಡಂಬಾರು ಸಮೀಪದ ದುರ್ಗಿಪಳ್ಯ ನಿವಾಸಿ ಮಹಮ್ಮದಿ ಅಫ್ರಿದ್ (22) ಮತ್ತು ಮುಕ್ತಾನ ನಿವಾಸಿ ಮಹಮದ್ ಅರ್ಷ್ದದ (18) ಎಂಬುವವರನ್ನು ತೊಕ್ಕೊಟ್ಟು ಬಳಿ ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಇನ್ನು ಬಂಧಿತ ಆರೋಪಿಗಳಿಂದ 2 ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ, 2.5 ಲಕ್ಷ ಮೌಲ್ಯದ ಹುಂಡೈ ಕಾರು, 50 ಸಾವಿರ ರೂ. ಮೌಲ್ಯದ ಸ್ಕೂಟರ್, 3 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಒಟ್ಟು ಸ್ವಾಧೀನಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ