ರಾಯಚೂರು:
ಜ್ಯೋತಿಷ್ಯ ಶಾಸ್ತ್ರದ ಆಧುನಿಕ ಬ್ರಹ್ಮ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಅವರು ರಾಶಿ ಸ್ತಾನಗಳಲ್ಲಿ ಗುರು ಬದಲಾವಣೆಯಿಂದಾಗಿ ಡಿಸೆಂಬರ್ 19ರ ನಂತರ ರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯಾಗುವ ನಿರೀಕ್ಷೆ ಇದೆ ಎಂದು ಭವಿಷ್ಯ ನುಡಿಯುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಕರ್ನಾಟಕದ ಸಿಎಂ ಕುಮಾರಸ್ವಾಮಿಗೆ ಗುರು ಬದಲಾವಣೆಯಿಂದ ಭಾರಿ ಕಂಟಕ ಕಾದಿದೆ ಇಷ್ಟು ದಿನ ಇದ್ದ ಹೂವಿನ ಹಾದಿ ಇನ್ನೂ ಮುಳ್ಳಿನ ಹಾದಿಯಾಗಿ ಪರಿವರ್ತನೆಯಾಗುವ ಎಲ್ಲಾ ಲಕ್ಷಣ ಕಾಣುತ್ತಿವೆ ಎಂದು ಗುರೂಜಿ ಹೇಳಿದ್ದಾರೆ. ಮಾರ್ಚ್ 27 ರವರೆಗೆ ಸಿಎಂ ತುಂಬಾ ಎಚ್ಚರ ವಹಿಸಲೇ ಬೇಕು ಎಂದು ತಿಳಿಸಿದ್ದಾರೆ .
ಇಲ್ಲದಿದ್ದರೇ ಭಾರೀ ಬದಲಾವಣೆ ಎದುರಿಸಬೇಕಾದೀತು ಎಂದು ತಿಳಿಸಿದ್ದಾರೆ. ಕುಮಾರಸ್ವಾಮಿ ಮಾತಿನ ಮೇಲೆ ನಿಗಾ ಇಡಬೇಕು. ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾ ಹೋದರೆ ಸಿಎಂ ಖುರ್ಚಿಗೆ ಕಂಟಕ. ಉತ್ತಮ ಕುಟುಂಬದಿಂದ ಬಂದಿರುವ ಕುಮಾರಸ್ವಾಮಿಯವರಿಗೆ ಇನ್ನೂ ಶನಿ ಕಂಟಕ ಇದೆ ಅಂತ ಗುರೂಜಿ ಎಚ್ಚರಿಕೆಯ ಸಂದೇಶ ರವಾನಿಸಿದ್ದು .
ವಿಪಕ್ಷ ನಾಯಕ ಹಾಗು ಕುಮಾರಣ್ಣನ ಬದ್ದ ವೈರಿ ಎಂದೇ ಖ್ಯಾತರಾದ ಬಿಎಸ್ ವೈಗೆ ಮುಂದಿನ ದಿನಮಾನಗಳಲ್ಲಿ ಮಾನಸಿಕ ನೆಮ್ಮದಿ ಸಿಗಲಿದ್ದು ಕುಮಾರಣ್ಣ ಏನಾದರೂ ಎಡವಟ್ಟು ಮಾಡಿಕೊಂಡಲ್ಲಿ ಸಿಎಂ ಸ್ಥಾನ ಡಿಕೆಶಿಗೆ ದೊರೆಯಲಿದೆ ಎಂದು ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








