ಬೆಂಗಳೂರಿನಲ್ಲಿ ಅ.11ರವರೆಗೆ ‘ನೈಟ್ ಕರ್ಪ್ಯೂ’ ವಿಸ್ತರಣೆ!!

ಬೆಂಗಳೂರು : 

       ನೈಟ್ ಕರ್ಪ್ಯೂವನ್ನು ( Night Curfew ) ವಿಸ್ತರಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.

      ಈ ಕುರಿತಂತೆ ನೈಟ್ ಕರ್ಪ್ಯೂ ವಿಸ್ತರಿಸಿ ಆದೇಶ ಹೊರಡಿಸಿರುವಂತ ಅವರು, ಬೆಂಗಳೂರು ನಗರದಲ್ಲಿ ( Bengaluru City ) ನೈಟ್ ಕರ್ಪ್ಯೂವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಈ ಆದೇಶ ಕ್ರಮಗಳು ಅಕ್ಟೋಬರ್ 11, 2021ರವರೆಗೆ ಜಾರಿಯಲ್ಲಿ ಇರಲಿವೆ ಎಂದಿದ್ದಾರೆ.

     ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಪಾಲಿಸಬೇಕು. ಒಂದು ವೇಳೆ ಪಾಲಿಸದೇ ಇದ್ದರೇ, ವಿಪತ್ತು ನಿರ್ವಹಣಾ ಕಾಯ್ದೆ, 2005, ಐಪಿಸಿ ಸೆಕ್ಷನ್ 188 ರ ಸೆಕ್ಷನ್ 5ಎಲ್ ರಿಂದ 60 ರ ನಿಬಂಧನೆಗಳು ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಕಲಂ 4, 5 ಮತ್ತು 10 ಅನುಸಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link