ರಾಜ್ಯದಲ್ಲಿ ಇಂದಿನಿಂದಲೇ ಮತ್ತೆ ‘ನೈಟ್ ಕರ್ಫ್ಯೂ’ ಜಾರಿ!!

ಬೆಂಗಳೂರು : 

     ರಾಜ್ಯದಲ್ಲಿ ಕೋವಿಡ್-19 ಹೊಸ ರೂಪಾಂತರದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.

     ರಾಜ್ಯದಲ್ಲಿ ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಜನವರಿ 2 ರವರೆಗೆ ಮುಂದುವರೆಯಲಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಬೆಳಿಗ್ಗೆ 6 ಗಂಟೆ ಬಳಿಕ ಜನಜೀವನ ಎಂದಿನಂತೆ ನಡೆಯಲಿದೆ   ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

      ಕಳೆದೊಂದು ವರ್ಷದಿಂದ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಅಬ್ಬರ ಕಡಿಮೆಯಾಗುವ ಹಂತದಲ್ಲಿದೆ ಎನ್ನುವಾಗಲೇ ಇದರ ಹೊಸ ರೂಪಾಂತರ ಜಗತ್ತಿನ ನಿದ್ದೆಗೆಡಿಸಿದೆ. ಬ್ರಿಟನ್‌ನಲ್ಲಿ ಈ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಭಾರತ ಸೇರಿ ವಿಶ್ವದ ಅನೇಕ ರಾಷ್ಟ್ರಗಳು ಅಲರ್ಟ್ ಆಗಿವೆ. ಯುಕೆಯಿಂದ ಬರುವ ವಿಮಾನಗಳನ್ನು ರದ್ದುಗೊಳಿಸಿವೆ. ಸದ್ಯ ರಾಜ್ಯದಲ್ಲೂ ಈ ಹೊಸ ವೈರಸ್ ತಡೆಯುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap