ಮೇ 26ರಿಂದ ರಾಜ್ಯದ ದೇವಸ್ಥಾನಗಳಲ್ಲಿ ಆನ್’ಲೈನ್ ಪೂಜೆ!!

ಬೆಂಗಳೂರು :

     ಲಾಕ್ ಡೌನ್ ನಾಲ್ಕನೇ ಹಂತದಲ್ಲಿರುವ ಈ ಸಮಯದಲ್ಲಿ ಕೆಲವು ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆ ನೀಡಲು ಭಕ್ತರಿಗೆ ಅವಕಾಶ ನೀಡಲು ಸರಕಾರ ಚಿಂತನೆ ನಡೆಸಿದೆ.

     ಈ ಕುರಿತು ಮಾಹಿತಿ ನೀಡಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ದೇವಾಲಯಗಳಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ನೀಡಲು ನಿರ್ಧಾರಿಸಲಾಗಿದೆ. ರಾಜ್ಯದ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬನಶಂಕರಿ ಸೇರಿದಂತೆ 50 ದೇವಾಲಯಗಳಲ್ಲಿ ಅವಕಾಶ ನೀಡಲಾಗುವುದು. ಮೇ 26ರಿಂದ ಅವಕಾಶ ನೀಡಲಾಗುವುದು ಎಂದರು.

      ವೆಬ್ ಸೈಟ್ ಒಂದನ್ನು ಅಭಿವೃದ್ಧಿ ಪಡಿಸಲಾಗಿದೆ ಆ ವೆಬ್ಸೈಟ್ ಮುಖಂತರ ಜನರು ದೇವರ ದರ್ಶನ ಕುರಿತು ಮಾಹಿತಿ ಪಡೆದುಕೊಳ್ಳಬಹುದು . ಪೂಜ ಸೇರಿದಂತೆ ಲೈವ್ ದರ್ಶನ ವ್ಯವಸ್ಥೆ ಮಾಡಲಾಗುವುದು, ರಥೋತ್ಸವದಂತಹ ಕಾರ್ಯಕ್ರಮ , ಹೆಚ್ಚು ಜನ ಸೇರುವ ಕಾರ್ಯಕ್ರಮ ಹೊರತುಪಡಿಸಿ ಇನ್ನೆಲ್ಲಾ ರೀತಿಯ ಕಾರ್ಯಕ್ರಮ ತೋರಿಸಲಾಗುವುದು ಎಂದರು.

     ಭಕ್ತರು ಆನ್ ಲೈನ್ ಮೂಲಕ ಜಣ ಪಾವತಿಸಿ ತಮ್ಮ ಹೆಸರಿನಲ್ಲಿ 20 ಸೇವೆ ಪೂಜೆ ಮಾಡಿಸಬಹುದು. ಈ ಕುರಿತು ಸರಕಾರ ಮುಂದಿನ ದಿನಗಳಲ್ಲಿ ಆದೇಶ ಹೊರಡಿಸುವ ನಿರೀಕ್ಷೆ ಇದೆ.

     ಕೋವಿಡ್-19 ಲಾಕ್ ಡೌನ್ ಕಾರಣದಿಂದ ರಾಜ್ಯದ ದೇವಾಲಯಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಸ್ಥಗಿತವಾಗಿದೆ. ಲಾಕ್ ಡೌನ್ ಕಾರಣದಿಂದ ಭಕ್ತರು ದೇವಾಲಯಗಳಲ್ಲಿ ಪೂಜೆ, ಸೇವಾಗಳಲ್ಲಿ ಭಾಗವಹಿಸಲು ಅವಕಾಶ ಸಿಕಿರಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link