ಬೆಂಗಳೂರು:
ನಾಳೆ(ಜ.24) ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೂ ಕೇಬಲ್ ಸೆಟ್‌ಅಪ್ ಬಾಕ್ಸ್ ಹೊಂದಿದ ಮನೆಗಳ ಟಿವಿಯಲ್ಲಿ ಯಾವುದೇ ಚಾನೆಲ್‌ಗಳು ಬರುವುದಿಲ್ಲ.
ಹೌದು , ಫೆಬ್ರವರಿ 1ರಿಂದ ಚಾನೆಲ್ಗಳಿಗೆ ಹೊಸ ದರ ನಿಗದಿ ಮಾಡಲು TRAI ಮುಂದಾಗಿದೆ. ಟ್ರಾಯ್ ಜಾರಿಗೊಳಿಸುತ್ತಿರುವ ಹೊಸ ಕೇಬಲ್ ಮತ್ತು ಡಿಟಿಎಚ್ ನೀತಿ ವಿರೋಧಿಸಿ ಜ.24ರಂದು ಬೆಳಗ್ಗೆ 6ರಿಂದ ರಾತ್ರಿ 10 ರವರೆಗೆ ದಕ್ಷಿಣ ಭಾರತದಾದ್ಯಂತ ಕೇಬಲ್ ಟೀವಿ ಬಂದ್ ಮಾಡಲು ಕೇಬಲ್ ಟೀವಿ ಆಪರೇಟರ್ ಸಂಘಟನೆಗಳು ನಿರ್ಧರಿಸಿವೆ.
ದಕ್ಷಿಣ ಭಾರತ ಮಾತ್ರವಲ್ಲ ಉತ್ತರ ಭಾರತ ಹಲವಾರು ರಾಜ್ಯದಲ್ಲಿ ಜ.24ರಂದು ಕೇಬಲ್ ಟೀವಿ ಆಪರೇಟಿಂಗ್ ಸಿಸ್ಟಂ ಸ್ಥಗಿತಗೊಳಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಗ್ರಾಹಕರಿಗೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗಿದೆ.
ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಟೀವಿ ಚಾನಲ್ ಬಂದ್ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಈ ನೀತಿ ಹಿಂಪಡೆಯಬೇಕು. ಇಲ್ಲವಾದರೆ ಕೇಬಲ್ ಟೀವಿ ಆಪರೇಟರ್‌ಗಳು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಹೊಸ ನೀತಿಯು ಜಾರಿಗೆ ಬಂದಲ್ಲಿ ಗ್ರಾಹಕ ತನಗೆ ಇಷ್ಟವಾದ ಚಾನೆಲ್‌ಗೆ ಮಾತ್ರವೇ ಹಣ ನೀಡಿ ನೋಡಬಹುದಾಗಿದೆ. ಇದು ಕೇಬಲ್ ಆಪರೇಟರ್‌ಗಳಿಗೆ ಆದಾಯ ಕಡಿಮೆ ಮಾಡುವ ಜೊತೆಗೆ ಶ್ರಮ ಹೆಚ್ಚಿಸುತ್ತದೆ ಎನ್ನಲಾಗುತ್ತಿದೆ. ಜೊತೆಗೆ ಗ್ರಾಹಕರಿಗೂ ಇದು ಹೊರೆಯಾಗುತ್ತದೆ ಎಂದು ಕೇಬಲ್ ಟಿವಿ ಆಪರೇಟರ್‌ಗಳು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ