ಸಂಡೇ ಸಂಪೂರ್ಣ ಲಾಕ್’ಡೌನ್ ಇಲ್ಲ ; ನಾಳೆ ಎಂದಿನಂತೆ ಚಟುವಟಿಕೆ!!!

ಬೆಂಗಳೂರು: 

These are the revised guidelines for Karnataka — saloons, shops ...

      ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿದ ಬಳಿಕ ಪ್ರತಿ ಭಾನುವಾರ ಹೇರಲಾಗಿದ್ದ ಕರ್ಫ್ಯೂವನ್ನು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ತೆರವುಗೊಳಿಸಿದ್ದಾರೆ.

      ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿತ್ತು. ಆದರೆ ಇಂದು ದಿಢೀರ್ ತೀರ್ಮಾನ ಕೈಗೊಂಡು ನಾಳಿನ ಕರ್ಫ್ಯೂವನ್ನು ಸರ್ಕಾರ ಕೈ ಬಿಟ್ಟಿದೆ.

       ಆದ್ದರಿಂದ ನಾಳೆ ಕೂಡ ಎಂದಿನಂತೆ ಆಟೋ, ಉಬರ್ ಸೇವೆ ಇರುತ್ತದೆ.ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಎಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಂಚಾರ ಮಾಡಲಿದೆ. ಮದ್ಯದಂಗಡಿ, ಮಾಂಸದಂಗಡಿಗಳು ತೆರೆದಿರುತ್ತವೆ. ಬ್ಯೂಟಿಪಾರ್ಲರ್, ಸೆಲೂನ್, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. 

       ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap