ನಾಳೆಯಿಂದ 3 ದಿನ ಮಲೆಮಹದೇಶ್ವರ ದೇವಾಲಯ ಪ್ರವೇಶ ನಿಷೇಧ!!

ಚಾಮರಾಜನಗರ :

      ಮಲೆಮಹದೇಶ್ವರ ದೇವಸ್ಥಾನದಲ್ಲಿ ಜೂನ್​​ 19ರಿಂದ 21 ರವರಗೆ ಭಕ್ತರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ.

     ಕೊರೊನಾ ಲಾಕ್ ಡೌನ್ ಬಳಿಕ ಜೂನ್ 8ರಿಂದ ದೇವಸ್ಥಾನಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಹಾಗೆಯೇ ರಾಜ್ಯದ ಬಹುತೇಕ ದೇವಸ್ಥಾನಗಳನ್ನೂ ತೆರೆಯಲಾಯಿತು. ಲಾಕ್ ಡೌನ್ ನಿಯಮ ಪಾಲನೆ ಅನ್ವಯ ಭಕ್ತಾದಿಗಳಿಗೆ ಪ್ರವೇಶ ಒದಗಿಸಲಾಗಿತ್ತು. ಮಲೆ ಮಹದೇಶ್ವರ ದೇವಸ್ಥಾನವನ್ನೂ ತೆರೆಯಲಾಗಿತ್ತು.

     ಜೂನ್ 19ರಂದು ಎಣ್ಣೆ ಮಜ್ಜನ, ಜೂನ್ 20,21ರಂದು ಅಮವಾಸ್ಯೆ ಪೂಜೆ ಇದ್ದು, ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಹೆಚ್ಚು ಜನರು ಆಗಮಿಸುವ ಸಾಧ್ಯತೆ ಇದೆ.

madeshwara (With images) | Hindu gods, Art, Hanumanji

      ಭಾನುವಾರ ಮತ್ತು ರಜಾ ದಿನಗಳಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿರುತ್ತದೆ. ಈ ಸಮಯದಲ್ಲಿ ಕೊರೋನಾ ವಿರುದ್ಧ ಹೋರಾಡಲು ಸಂರಕ್ಷಣಾ ಕ್ರಮಗಳನ್ನು ಕೈಗೊಂಡರೂ ಸಹ ಸುಮಾರು 50,000 ಭಕ್ತರು ಬರುವ ಸಂಭವವಿರುವುದರಿಂದ ಭಕ್ತರನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ದೇವರ ದರ್ಶನ ಮಾಡಿಸಲು ಕಷ್ಟ ಸಾಧ್ಯವಾಗಲಿದೆ.

      ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ಭಕ್ತಾದಿಗಳ ಆರೋಗ್ಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ದರ್ಶನಕ್ಕೆ ತಡೆ ಒಡ್ಡಲು ಜಿಲ್ಲಾಡಳಿತ ನಿರ್ಧರಿಸಿ ಘೋಷಣೆ ಹೊರಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap