‘ನೋ ಹೆಲ್ಮೆಟ್-ನೋ ಪೆಟ್ರೋಲ್’ : ಸೋಮವಾರದಿಂದಲೇ ಜಾರಿಗೆ!!

ಬೆಂಗಳೂರು :

      ‘ನೋ ಹೆಲ್ಮೆಟ್ – ನೋ ಪೆಟ್ರೋಲ್’ ನಿಯಮವನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಡ್ಡಾಯಗೊಳಿಸಲಾಗಿದ್ದು, ಸೋಮವಾರದಿಂದಲೇ ಈ ಆದೇಶ ಜಾರಿಗೆ ಬರಲಿದೆ.

      ಈಗಾಗಲೇ ನಗರದ ಕೆಲವು ಬಂಕ್‌ಗಳಲ್ಲಿ ಈ ನಿಯಮ ಜಾರಿಯಲ್ಲಿದೆ. ಬಳಿಕ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುತ್ತದೆ. ಆ ದಿನದಿಂದ ಸವಾರರು ಹೆಲ್ಮೆಟ್‌ ಧರಿಸಿರದಿದ್ದರೆ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್‌ ಸಿಗುವುದಿಲ್ಲ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ತಿಳಿಸಿದ್ದಾರೆ.

Image result for helmet petrol

      ಅಮೆರಿಕದ ಅಧ್ಯಯನದ ಪ್ರಕಾರ, ಉತ್ತಮ ಹೆಲ್ಮೆಟ್​ಗಳು ಧರಿಸುವುದರಿಂದ ಅಪಘಾತಗೊಂಡ ಗಾಯಾಳು ಬದುಕುವ ಸಾಧ್ಯತೆ ಶೇ 42ರಷ್ಟು ಹೆಚ್ಚಿರುತ್ತದೆ. ಅಲ್ಲದೇ ಶೇ69ರಷ್ಟು ಜನರು ಗಾಯಗೊಳ್ಳುವುದರಿಂದ ಪಾರಾಗಬಹುದು. ಈ ಹಿನ್ನೆಲೆಯಲ್ಲಿ ಪೆಟ್ರೋಲ್​ ಬಂಕ್​ಗಳಲ್ಲಿ ಇನ್ಮುಂದೆ ಹೆಲ್ಮೆಟ್​ ಇದ್ದರೆ ಮಾತ್ರ ಇಂಧನ ನೀಡುವಂತೆ ಬಂಕ್​ ಮಾಲೀಕರಿಗೆ ಸೂಚನೆ ನೀಡಲಾಗುವುದ. ಆಗಸ್ಟ್​ 5ರಿಂದ ಈ ಯೋಜನೆ ಚಾಲನೆಗೆ ಬರುವ ಸಾಧ್ಯತೆ ಇದ್ದು, ಈ ಮೂಲಕ ಪ್ರಯಾಣಿಕರ ಸುರಕ್ಷತೆ ಒಂದು ಹೆಜ್ಜೆ ಮುಂದಿಡಲಾಗುವುದು ಎಂದರು.

ಹೆಲ್ಮೆಟ್ ಧರಿಸದಿದ್ದರೆ, ಪೆಟ್ರೋಲ್ ಸಿಗಲ್ಲ!!!

     ಈ ಕುರಿತು ಚರ್ಚಿಸಲು ಒಂದೆರೆಡು ದಿನಗಳಲ್ಲಿ ಬಂಕ್‌ ಮಾಲೀಕರ ಸಭೆ ಕರೆಯಲಾಗುತ್ತದೆ. ಈ ವೇಳೆ ಅವರ ಸಹಕಾರ, ನೆರವಿನೊಂದಿಗೆ ಅವರಿಂದ ಒಂದು ಒಳ್ಳೆಯ ಕೆಲಸಕ್ಕೆ ಸಾಮಾಜಿಕ ಜಾಗೃತಿ ಮೂಡಿಸಲು ನಿಯಮ ಜಾರಿ ಮಾಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ