ಸಿನಿಮಾಡೆಸ್ಕ್:

ಮುಂದಿನ ವರ್ಷದಿಂದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡದಿರಲು ಪೊಲೀಸರು ನಿರ್ಧರಿಸಿದ್ದಾರೆ.
ನಟ ದರ್ಶನ್ ಮನೆ ಮುಂದೆ ಹುಟ್ಟುಹಬ್ಬ ಆಚರಣೆ ವೇಳೆಯಲ್ಲಿ ಅಕ್ಕ-ಪಕ್ಕದ ಮನೆಯವರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಅಕ್ಕ-ಪಕ್ಕದ ಮನೆಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಕೂಡ ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ.

ಹುಟ್ಟು ಹಬ್ಬಕ್ಕೆ ಆಗಮಿಸುವ ಕೆಲವು ಕಿಡಿ ಗೇಡಿಗಳು ಕಾಪೌಂಡ್‌ಗಳ ಮೇಲೆ ಕುಳಿತುಕೊಳ್ಳುವುದು, ಹೂವಿನ ಕುಂಡಗಳನ್ನು ಹೊಡೆದು ಹಾಕುತ್ತಿದ್ದರು ಎನ್ನುವ ಆರೋಪ ಕೂಡ ಕೇಳಿ ಬಂದಿದ್ದವು, ಇದಲ್ಲದೇ ಈ ಬಾರಿ ದರ್ಶನ್ ಹುಟ್ಟು ಹಬ್ಬದ ವೇಳೆಯಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಮೇಲೆ ದರ್ಶನ್ ಅಭಿಮಾನಿಗಳು ಗಂಭೀರವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿವೆ. ಹೀಗಾಗಿ, ‘ಒಡೆಯ’ನ ಮನೆ ಮುಂದೆ ಜನ್ಮದಿನದ ಆಚರಣೆಗೆ ಬ್ರೇಕ್ ಹಾಕಲು ಹಿರಿಯ ಪೊಲೀಸ್ ಅಧಿಕಾರಿ ನಿರ್ಧರಿಸಿದ್ದಾರೆ.
ಅಂದ ಹಾಗೇ ಮುಂದಿನ ವರ್ಷದಿಂದ ಮೈದಾನದಲ್ಲಿ ಆಚರಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








