ಭುವನೇಶ್ವರ್:
ಒಡಿಶಾ ರಾಜ್ಯದ ಮುಖ್ಯಮಂತ್ರಿಯಾಗಿ ಸತತ 5ನೇ ಬಾರಿಗೆ ನವೀನ್ ಪಟ್ನಾಯಕ್ ಅವರು ಬುಧವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.
ದೇಶಾದ್ಯಂತ ಕಂಡುಬಂದ ಬಿಜೆಪಿಯ ಅಬ್ಬರದ ನಡುವೆಯೂ ಭಾರಿ ಗೆಲುವು ಸಾಧಿಸಿದ, ಬಿಜೆಡಿ ನಾಯಕ ನವೀನ್ ಪಟ್ನಾಯಕ್ ಕಳೆದ 19 ವರ್ಷಗಳಿಂದ ಒಡಿಶಾದ ಚುಕ್ಕಾಣಿಯನ್ನು ಅವರ ಕೈಯಲ್ಲೇ ಇರಿಸಿಕೊಂಡಿದ್ದು, 5ನೇ ಬಾರಿಗೆ ಒಡಿಶಾದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
#Visuals Naveen Patnaik takes oath as the Chief Minister of Odisha for a fifth time pic.twitter.com/o82Qkx1xn6
— ANI (@ANI) May 29, 2019
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 10,000ಕ್ಕಿಂತಲೂ ಹೆಚ್ಚು ಮಂದಿ ಭಾಗಿಯಾಗಿದ್ದರು. ನವೀನ್ ಪಟ್ನಾಯಕ್ ಜತೆ 20 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
