ಸಾವಿನಲ್ಲೂ ಒಂದಾದ ನಿವೃತ್ತ ಶಿಕ್ಷಕ ದಂಪತಿಗಳು!!

ಬೆಳಗಾವಿ:

     ಪತಿಯ ಸಾವಿನ ಸುದ್ದಿ ತಿಳಿದು ಕೇವಲ ಒಂದೇ ತಾಸಿನಲ್ಲಿ ಪತ್ನಿಯೂ ಹೃದಯಾಘಾತದಿಂದ ನಿಧನರಾಗಿ ಸಾವಿನಲ್ಲೂ ವೃದ್ಧ ದಂಪತಿ ಒಂದಾದ ಘಟನೆ ಇಲ್ಲಿಯ ಭಾಗ್ಯ ನಗರದಲ್ಲಿ ನಡೆದಿದೆ.

     ನಿವೃತ್ತ ಶಿಕ್ಷಕ ಗುರುರಾಜ ಅಧ್ಯಾಪಕ (89) ಹಾಗೂ ಪತ್ನಿ ನಿವೃತ್ತ ಶಿಕ್ಷಕಿ ಅಲಕಾ ಗುರುರಾಜ ಅಧ್ಯಾಪಕ (84) ನಿಧನರಾದ ನಿವೃತ್ತ ವೃದ್ಧ ದಂಪತಿಗಳು.

      ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಪತಿ ಗುರುರಾಜ ನಿಧನರಾಗಿದ್ದಾರೆ. ಪತಿಯ ಸಾವಿನ ಸುದ್ದಿ ಪತ್ನಿಗೆ ಬರಸಿಡಿಲಿನಂತೆ ಎರಗಿದೆ. ಈ ಆಘಾತದಿಂದ ಪತ್ನಿ ಅಲಕಾ ಕೇವಲ 45 ನಿಮಿಷಗಳ ಅಂತರದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

      ಶಿಕ್ಷಕ ಗುರುರಾಜ ಸರಸ್ವತಿ ಪ್ರೌಢಶಾಲೆಯಲ್ಲಿ ಮುಖ್ಯೋಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರೆ, ಪತ್ನಿ ಅಲಕಾ ಅವರು ಗೋಮಟೇಶ ಪ್ರೌಢಶಾಲೆಯಲ್ಲಿ ಮುಖ್ಯೋಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದರು.

     ಮೃತರು ಪುತ್ರಿಯರು, ಅಳಿಯಂದಿರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.  ನಿವೃತ್ತ ವೃದ್ಧ ಶಿಕ್ಷಕರು, ದಂಪತಿಗಳು ಸಾವಿನಲ್ಲೂ ಒಂದಾಗಿದ್ದು ಅಪರೂಪದ ಘನೆಯಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap