ಬೆಂಗಳೂರು:
ಭಾರತದ ಅತ್ಯಗತ್ಯ ತರಕಾರಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಈರುಳ್ಳಿಯನ್ನು ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿಗೆ 1 ರೂ.ನಂತೆ ಮಾರಾಟಮಾಡಲಾಗುತ್ತಿದೆ!
ವಾರದ ಹಿಂದೆ ಕ್ವಿಂಟಾಲ್ ಗೆ ಕೇವಲ 500 ರೂಪಾಯಿ ಇದ್ದ ಈರುಳ್ಳಿ ಬೆಲೆ, ನಂತರ 200 ರೂಪಾಯಿಗೆ ಕುಸಿದು, ಇದೀಗ ಪ್ರತಿ ಕ್ವಿಂಟಾಲ್ ಗೆ 100 ರೂ. ಆಗಿದೆ.
ಈರುಳ್ಳಿ ಫೂರೈಕೆ ಹೆಚ್ಚಾಗಿ, ಮಾರುಕಟ್ಟೆಗಳಲ್ಲಿ ಈರುಳ್ಳಿ ರಾಶಿ ರಾಶಿ ಬಿದ್ದಿರುವುದೇ ಬೆಲೆ ಇಳಿಕೆಯಾಗಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.
ನೆರೆಯ ತಮಿಳುನಾಡು ಮತ್ತು ಕೇರಳ ಮತ್ತಿತರ ರಾಜ್ಯಗಳಿಗೆ ಕರ್ನಾಟಕ ಈರುಳ್ಳಿಯನ್ನು ಪೂರೈಕೆ ಮಾಡುತ್ತಿತ್ತು. ಆದರೆ ಗಜ ಚಂಡಮಾರುತದ ಕಾರಣದಿಂದಾಗಿ ಈ ರಾಜ್ಯಗಳಿಗೆ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಈರುಳ್ಳಿಯನ್ನು ನೆರೆಯ ರಾಜ್ಯಗಳಿಗೆ ಸಾಗಿಸಲು ಸಾಧ್ಯವಾಗಿಲ್ಲ. ಆ ಕಾರಣದಿಂದ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ