ಕಾರವಾರ:
ಸ್ವಂತ ಮಗಳ ಮೇಲೆ ಸ್ವಂತ ತಂದೆಯೇ ಅತ್ಯಾಚಾರ ಮಾಡಿದ ಘಟನೆ ಶಿರಸಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ತಂದೆಯ ವಿರುದ್ಧ ಪೊಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
34 ವರ್ಷದ ಮಹಮ್ಮದ್ ಉಬೆದುಲ್ಲಾ ಶೇಖ್ ತನ್ನ 15 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಮತ್ತು ಈತ ಶಿವಮೊಗ್ಗದ ಹೊನ್ನಾಳಿ ರಸ್ತೆಯಲ್ಲಿರುವ ರಾಗಿಗುಡ್ಡಾದವನಾಗಿದ್ದು, ಶಿರಸಿಯಲ್ಲಿ ಈತನ ಪತ್ನಿಯ ಮನೆ ಇದೆ. ಇಲ್ಲಿ ಬಂದಾಗ ಅತ್ಯಾಚಾರ ಮಾಡಿದ್ದಾನೆ ೆಂದು ತಿಳಿದು ಬಂದಿದೆ.
ಆರೋಪಿಯೂ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿಕೊಂಡು ಬಂದಿದ್ದು, ಆಕೆ ಗರ್ಭವತಿಯಾಗಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಪತ್ನಿ ಪ್ರತಿಭಟಿಸಿದರೂ ಉಬೇದುಲ್ಲಾ ಶೇಖ್ ಪತ್ನಿಗೆ ಕೊಲೆ ಮಾಡುವ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿದ್ದನು. ಆದರೆ ಆಕೆ ಗರ್ಭವತಿಯಾಗಿ ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವನ್ನೂ ಸಹ ಹಡೆದಿದ್ದು, ಆಸ್ಪತ್ರೆಯಲ್ಲಿ ದಾಖಲೆ ಸಹ ನೀಡದೆ ಮನೆಗೆ ಕರೆತರಲಾಗಿತ್ತು.
ನಂತರ ಮಕ್ಕಳ ಜನನ ದಾಖಲೆ ಪಡೆಯಲು ಅಂಗನವಾಡಿ ಕಾರ್ಯಕರ್ತೆ, ಮನೆಗೆ ಹೋದಾಗ ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ವೇಳೆ ಅಪ್ರಾಪ್ತ ಬಾಲಕಿಯೇ ತನ್ನ ತಂದೆ ಮಾಡಿದ ಪಾಪಕೃತ್ಯವನ್ನು ಬಯಲಿಗೆಳೆದಿದ್ದು ಆಕೆ ದೂರು ನೀಡಿದ್ದಾಳೆ.
ಈ ಹಿನ್ನೆಲೆಯಲ್ಲಿ ಶಿರಸಿ ನಗರ ಮಾರುಕಟ್ಟೆ ಠಾಣೆ ಪಿಎಸ್ಐ ಶಶಿಕುಮಾರ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಪೊಕ್ಸೋ ಕಾಯ್ದೆಯಡಿ ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಆರೋಪಿ ಮಹಮ್ಮದ್ ಉಬೆದುಲ್ಲಾ ವಿರುದ್ಧ ನಗರದ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








