ನವದೆಹಲಿ :
ಲಾಕ್ ಡೌನ್ ಆದೇಶವನ್ನು ಕಠಿಣವಾಗಿಸಲು ನಾಳೆಯಿಂದಲೇ ರಾಜ್ಯದಲ್ಲಿ ಪ್ಯಾರಮಿಲಿಟರಿ ನಿಯೋಜಿಸಲಾಗುತ್ತಿದೆ.
ಹೌದು, ಮಾರಣಾಂತಿಕ ಕೊರೊನಾ ಸೋಂಕು ತಡೆಗಟ್ಟಲು ಕಟ್ಟುನಿಟ್ಟಾಗಿ ಪಾಲಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಆದರೆ, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಈ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಗೃಹ ಸಚಿವ ಅಮಿತ್ ಶಾ ಅವರೇ ರಾಜ್ಯಗಳಲ್ಲಿನ ಲಾಕ್ ಡೌನ್ ಪಾಲನೆಯನ್ನು ಖುದ್ದಾಗಿ ಅವಲೋಕಿಸಿದ್ದಾರೆ. ಈಗಾಗಲೇ ಕೇಂದ್ರದ ಸಚಿವರು ಹಾಗೂ ಸಂಸದರ ಜೊತೆ ಸಭೆ ನಡೆಸಿ ಲಾಕ್ ಡೌನ್ ಕುರಿತಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ನಾಳೆಯಿಂದಲೇ ರಾಜ್ಯದಲ್ಲಿ ಪ್ಯಾರಮಿಲಿಟರಿ ನಿಯೋಜಿಸುವ ಕುರಿತು ಚರ್ಚೆ ನಡೆಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಿದ್ದು, ಸೋಂಕು ತಡೆಗೆ ಲಾಕ್ ಡೌನ್ ಶೇ. 100 ರಷ್ಟು ಜಾರಿಯಾಗಬೇಕು. ಅಗತ್ಯ ವಸ್ತು, ಸೇವೆ ಹೊರತಾಗಿ ಅನಗತ್ಯ ಸಂಚಾರ ಸಂಪೂರ್ಣ ಬಂದ್ ಮಾಡಲು ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಲಾಗುವುದು ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ