ಗ್ರಹಣ : ಮಕ್ಕಳನ್ನು ಕುತ್ತಿಗೆವರೆಗೂ ಮಣ್ಣಲ್ಲಿ ಹೂತಿಟ್ಟು ಆಚರಣೆ!!

ಕಲಬುರ್ಗಿ :

       ಜಿಲ್ಲೆಯ ಹಲವೆಡೆ ಗ್ರಹಣದ ವೇಳೆ ಕೇಡಾಗುತ್ತದೆ ಎಂಬ ಭಯದಿಂದ ಮಕ್ಕಳನ್ನು ಕುತ್ತಿಗೆವರೆಗೂ ನೆಲದಲ್ಲಿ ಹೂತು ಹಾಕಿದ ಘಟನೆ ನಡೆದಿದೆ.

       ಕಲಬುರ್ಗಿ ತಾಲೂಕಿನ ತಾಜಾಸುಲ್ತಾನಪುರದಲ್ಲಿ ಮೂಢನಂಬಿಕೆಯಿಂದ ಮಕ್ಕಳನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂತು ಹಾಕಲಾಗಿದೆ. ಗ್ರಹಣ ಮುಗಿದನಂತರ ಹೊರ ತೆಗೆಯಲಾಗುವುದು ಎಂದು ಪೋಷಕರು ಹೇಳಿದ್ದಾರೆ.

      ಗ್ರಹಣದ ವೇಳೆಯಲ್ಲಿ ಮಕ್ಕಳಿಗೆ ಕೇಡಾಗಲಿದೆ. ಹಾಗಾಗಿ ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂಳುವಂತೆ ಹಿರಿಯರು ನೀಡಿದ ಸಲಹೆ ಮೇರೆಗೆ ಈ ರೀತಿ ಮಾಡಲಾಗಿದೆ. ಮೂಢನಂಬಿಕೆಯಿಂದ ಮಕ್ಕಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದು, ಇದರಿಂದಾಗಿ ನಿತ್ರಾಣಗೊಂಡ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ.

     ಹಿಂಸೆಯಿಂದ ಅಸ್ವಸ್ಥರಾಗಿರುವ ಮಕ್ಕಳನ್ನು ನೆಲದಿಂದ ತೆಗೆಯುವಂತೆ ಅನೇಕರು ಹೇಳಿದರೂ, ಜಾಗೃತಿ ಮೂಡಿಸಿದರೂ ಪೋಷಕರೇ ಅಮಾನವೀಯವಾಗಿ ಮಕ್ಕಳನ್ನು ದೇಹವನ್ನು ಮಣ್ಣಿನಲ್ಲಿ ಹೂತು ಹಾಕಿದ್ದು, ಪೋಷಕರು ಕೇಳದೇ ಮಕ್ಕಳ ಅಂಗವಿಕಲತೆ ಸರಿಯಾಗುತ್ತದೆ ಎಂಬ ನಂಬಿಕೆಯಿಂದ ಹಾಗೆಯೇ ಬಿಟ್ಟಿದ್ದಾರೆ.  

      ಈ ಬಗ್ಗೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ಇದುವರೆಗೂ ನೀಡಿಲ್ಲ. ಇನ್ನೂ ಈ ಪ್ರದೇಶಗಳಲ್ಲಿ ಇಂತಹ ಆಚರಣೆಗಳು ಸಾಮಾನ್ಯ ಎನ್ನಲಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link