ತುಮಕೂರು:
10 ಲಕ್ಷ ಹಣಕ್ಕೆ ಹೆತ್ತ ತಂದೆ-ತಾಯಿಯರೇ, ಅಪ್ರಾಪ್ತ ಮಗಳನ್ನು ಮಾರಾಟ ಮಾಡಿ, ವಯಸ್ಕನಿಗೆ ಮದುವೆ ಮಾಡಲು ನಿಶ್ಚಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕುರಿಹಳ್ಳಿ ಗ್ರಾಮದ ಬಸವಲಿಂಗಯ್ಯ ಮತ್ತು ಸುಶೀಲಮ್ಮ ದಂಪತಿಗಳು, ತಮ್ಮ 14 ವರ್ಷದ ಮಗಳನ್ನು 40 ವರ್ಷದ ಗಿರೀಶ್ ಎಂಬುವರಿಗೆ ಕೊಟ್ಟು ಮದುವೆ ಮಾಡಲು ತೀರ್ಮಾನಿಸಿದ್ದಾರೆ. ಎಂದು ರಾಜಶೇಖರ್ ಎಂಬುವರು ಆರೋಪಿಸಿದ್ದಾರೆ.
ಬಸವಲಿಂಗಯ್ಯ ಮತ್ತು ಸುಶೀಲಮ್ಮ ದಂಪತಿಗಳು, 40 ವರ್ಷದ ಗಿರೀಶ್ ಅವರಿಗೆ, ತಮ್ಮ 14 ವರ್ಷದ ಅಪ್ರಾಪ್ತ ಮಗಳನ್ನು ಕೊಡಲು, 10 ಲಕ್ಷ ಹಣ ಪಡೆದಿದ್ದಾರಂತೆ. ಅಲ್ಲದೇ ಗಿರೀಶ್ ಅವರೊಂದಿಗೆ ಈ ಬಗ್ಗೆ ಮೂರು ಅಗ್ರಿಮೆಂಟ್ ಕೂಡ ಮಾಡಿಕೊಂಡಿದ್ದು, ಅದರಲ್ಲಿನ ಮಾಹಿತಿ ಬೆಚ್ಚಿ ಬೀಳಿಸುತ್ತದೆ.
ಅಗ್ರಿಮೆಂಟ್ ನಲ್ಲಿ ಬಾಲಕಿಯನ್ನ ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಉಲ್ಲೇಖ ಮಾಡಲಾಗಿದೆ. ಮತ್ತೊಂದು ಅಗ್ರಿಮೆಂಟ್ ನಲ್ಲಿ ಬೇರೆ ಹುಡುಗರು ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಉಲ್ಲೇಖವಾಗಿದೆ.
ಈ ಅಗ್ರಿಮೆಂಟ್ ಗಳನ್ನು ಬಹಿರಂಗ ಪಡಿಸಿರುವ ರಾಜಶೇಖರ್, ಬಸವಲಿಂಗಯ್ಯ ಮತ್ತು ಸುಶೀಲಮ್ಮ ದಂಪತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ದಿ ಮತ್ತ ರಕ್ಷಣಾ ಇಲಾಖೆ ಗೆ ದೂರು ನೀಡಿದ್ದಾರೆ.
ಈ ಘಟನೆಯಿಂದಾಗಿ, 10 ದಿನಗಳಿಂದ ಮನೆಗೆ ಬೀಗ ಜಡಿದು ಮಗಳ ಜೊತೆಗೆ ಪರಾರಿಯಾಗಿರುವ ಬಸವಲಿಂಗಯ್ಯ ಮತ್ತು ಸುಶೀಲಮ್ಮ ದಂಪತಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ರಾಜಶೇಖರ್ ಒತ್ತಾಯಿಸಿದ್ದಾರೆ.
ಬಾಲ್ಯ ವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾನೂನಿನ ಪ್ರಕಾರ ಘೋರ ಅಪರಾಧ. ಕೇವಲ ಹಣಕ್ಕೋಸ್ಕರ ಹೆತ್ತ ತಂದೆ-ತಾಯಿಯೇ ಮಗಳನ್ನು ಮಾರಾಟ ಮಾಡಲು ಹೋದದ್ದು, ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ