ಬೆಂಗಳೂರು:
ಟಿಕೆಟ್ ಪಡೆಯದೇ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮೂರು ಕೋಳಿಗಳನ್ನು ಸಾಗಿಸುತ್ತಿದ್ದ ಪ್ರಯಾಣಿಕನಿಗೆ ತನಿಖಾಧಿಕಾರಿಗಳು ದಂಡ ಹಾಕಿರುವ ಘಟನೆ ನಡೆದಿದೆ.
ಕೂಡುರಸ್ತೆಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ತನಗೆ ಮಾತ್ರ ಟಿಕೆಟ್ ಪಡೆದಿದ್ದ, ಆದ್ರೆ ತನ್ನ ಜೊತೆ ಕರೆದುಕೊಂಡು ಬಂದಿದ್ದ ಕೋಳಿಗಳಿಗೆ ಕಂಡಕ್ಟರ್ ಬಳಿ ಟಿಕೆಟ್ ಪಡೆದಿರಲಿಲ್ಲ. ಈ ವೇಳೆ ಬಸ್ ತಪಾಸಣೆಗೆ ಬಂದ ತನಿಖಾಧಿಕಾರಿಗಳು ಕೋಳಿಗಳಿಗೆ ಅರ್ಧ ಟಿಕೆಟ್ ಪಡೆಯದಕ್ಕೆ ಪ್ರಯಾಣಿಕನಿಗೆ ಭರ್ತಿ 500 ರೂ. ದಂಡ ಹಾಕಿದ್ದಾರೆ.
ಇನ್ನು ಪ್ರತಿ ಕೋಳಿಯು ಮಂಗಳೂರಿನವರೆಗೂ ಬಸ್ಸಿನಲ್ಲಿ ಪ್ರಯಾಣಿಸಲು 78. ರೂ ಟಿಕೆಟ್ ಪಡೆಯಬೇಕಾಗಿತ್ತು. ಆದ್ರೆ ಈಗ 78ರ ಬದಲು 500 ರೂ. ಪ್ರಯಾಣಿಕ ದಂಡ ಕಟ್ಟಿದ್ದಾನೆ ಎನ್ನಲಾಗಿದೆ.
ಸಾರಿಗೆ ಬಸ್ಸುಗಳಲ್ಲಿ ಟಿಕೆಟ್ ರಹಿತ ಪ್ರಯಾಣ ದಂಡಕ್ಕೆ ಆಹ್ವಾನ ಎಂದು ಸಾಮಾನ್ಯವಾಗಿ ಬರೆದಿರುತ್ತಾರೆ. ಬರೀ ಮನುಷ್ಯರು ಮಾತ್ರ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ದಂಡ ಕಟ್ಟಬೇಕು ಅಂತ ಹಲವರು ಅಂದುಕೊಂಡಿರುತ್ತಾರೆ. ಆದ್ರೆ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಕರು ಕರೆದುಕೊಂಡು ಬರುವ ಪ್ರಾಣಿ ಪಕ್ಷಿಗಳಿಗೂ ಟಿಕೆಟ್ ಪಡೆಯಬೇಕು ಎನ್ನುವ ವಿಷಯ ಎಷ್ಟೋ ಜನಕ್ಕೆ ಗೊತ್ತಿರಲ್ಲ. ಹೀಗೆಯೇ ಟಿಕೆಟ್ ಪಡೆಯದೇ ಮೂರು ಕೋಳಿಗಳನ್ನು ಬಸ್ಸಿನಲ್ಲಿ ಸಾಗಿಸುತ್ತಿದ್ದ ಪ್ರಯಾಣಿಕನಿಗೆ ತಪಾಸಣೆಗೆ ಬಂದ ತನಿಖಾಧಿಕಾರಿಗಳು 500 ರೂ. ದಂಡ ಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ