ಯಾದಗಿರಿ : ನೀರಿಗಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಫೈಟ್!!

ಯಾದಗಿರಿ:

     ಬೋರ್​ವೆಲ್ ನೀರಿಗಾಗಿ ಕ್ವಾರಂಟೈನ್ ಕೇಂದ್ರದಲ್ಲಿರುವ ಜನರು ಜಗಳವಾಡಿಕೊಂಡ ಘಟನೆ ನಡೆದಿದೆ.

    ಮಹಾರಾಷ್ಟ್ರದಿಂದ್ದ ಬಂದಿದ್ದ ವಲಸೆ ಕಾರ್ಮಿಕರನ್ನ ಯಾದಗಿರಿ ನಗರದ ಡಿಡಿಯು ಶಾಲೆಯ ಕ್ವಾರಂಟೀನ್ ಮಾಡಲಾಗಿತ್ತು.

     ಈ ವೇಳೆ ಕ್ವಾರಂಟೀನ್ ಕೇಂದ್ರದ ಮುಂಭಾಗದಲ್ಲಿರುವ ಬೋರ್​ವೆಲ್  ಹತ್ತಿರ ಇಂದು ಬಟ್ಟೆ ತೊಳೆಯಲು ಹೋದಂತಹ ಕೆಲ ಮಹಿಳೆಯರು ಹಾಗೂ ಪುರುಷರು ನೀರಿಗಾಗಿ ದೊಡೆದಾಡಿಕೊಂಡಿದ್ದಾರೆ. ಮೊದಲು ಮಹಿಳೆಯರಿಬ್ಬರಿಂದ ಜಗಳ ಶುರುವಾಗಿದ್ದು, ನಂತರ ಓರ್ವ ವ್ಯಕ್ತಿ ಮಧ್ಯೆ ಪ್ರವೇಶಿಸಿದ್ದಾನೆ. ಈತ ಮಹಿಳೆಯೊಬ್ಬಳ ಮೇಲೆ ಹಲ್ಲೆ ಮಾಡಿದ್ದಾನೆ.

      ಕ್ವಾರಂಟೈನ್ ಕೇಂದ್ರದಲ್ಲಾದ ಈ ಗಲಾಟೆಯನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link