ಹೊಸವರ್ಷದಿಂದ ಹೆಚ್ಚಾಗಲಿದೆ ಕೇಬಲ್, ಡಿಟಿಹೆಚ್ ದರ!!

    2019 ರ ಹೊಸ ವರ್ಷದ ಆರಂಭದಲ್ಲೇ ಜನಸಾಮಾನ್ಯರಿಗೆ ಕಹಿ ಸುದ್ದಿಯೊಂದು ಕಾದಿದೆ. ಅಂದರೆ ಜನವರಿ ಒಂದರಿಂದ ಕೇಬಲ್ ಹಾಗೂ ಡಿಟಿಎಚ್ ದರಗಳು ದುಬಾರಿಯಾಗುವ ಸಾಧ್ಯತೆ ಇದೆ.

Related image

    ಇನ್ನು ಮುಂದೆ ನೀವೆ ನಿಮಗೆ ಇಷ್ಟವಾದ ಚಾನೆಲ್ ಗಳನ್ನ ಆಯ್ಕೆ ಮಾಡಿಕೊಂಡು ನೋಡಬಹುದು .. ನೀವು ಆಯ್ಕೆ ಮಾಡಿಕೊಂಡ ಚಾನೆಲ್ ಗಳಿಗಷ್ಟೆ ಹಣವನ್ನ ಪಾವತಿಸಬೇಕಾಗುತ್ತದೆ. 

     ಈ ಮೊದಲು ಕೇಬಲ್/ಡಿಟಿಎಚ್ ಆಪರೇಟರ್ ಹಲವು ಚಾನೆಲ್ ಗಳನ್ನು ಇಂತಿಷ್ಟು ದರಕ್ಕೆ ನೀಡುತ್ತಿದ್ದರು. ಆದರೆ ಇನ್ನು ಮುಂದೆ ಗ್ರಾಹಕರು ತಮ್ಮ ಆಯ್ಕೆಯ ಚಾನೆಲ್ ಗಳಿಗೆ ಮಾತ್ರ ಹಣ ನೀಡಬೇಕಿರುವ ಕಾರಣ ಇದು ದುಬಾರಿಯಾಗಬಹುದು ಅಥವಾ ಕಡಿಮೆಯೂ ಆಗಬಹುದು.

Image result for cable dth

      ಸದ್ಯ ಕೇಬಲ್ ಅಪರೇಟರ್ ಗಳು 300-350 ರೂಪಾಯಿಗಳಿಗೆ 400 ಚಾನೆಲ್ ಗಳನ್ನು ನೀಡುತ್ತಿದ್ದಾರೆ. ಗ್ರಾಹಕರು ಈ ಎಲ್ಲ ಚಾನೆಲ್ ವೀಕ್ಷಿಸುವುದಿಲ್ಲವಾದರೂ 400 ಚಾನೆಲ್ ಲಭ್ಯವಾಗುತ್ತಿದ್ದವು. ಆದರೆ ಇಷ್ಟೇ ಚಾನೆಲ್ ಗಳನ್ನು ಗ್ರಾಹಕರು ಪಡೆಯಬೇಕೆಂದರೆ ಕನಿಷ್ಟ 500 ರೂಪಾಯಿ ಪಾವತಿಸಬೇಕಾಗುತ್ತದೆ.

      ಗ್ರಾಮೀಣ ಭಾಗದ ಗ್ರಾಹಕರಿಗೂ ಇದರಿಂದ ಹೆಚ್ಚಿನ ಸಂಕಷ್ಟ ಉಂಟಾಗಲಿದೆ.ಬಹುತೇಕ ಅನಕ್ಷರಸ್ಥರಾಗಿರುವ ಗ್ರಾಹಕರಿಗೆ ಹೊಸ ದರ ವ್ಯವಸ್ಥೆ, ತಮಗಿಷ್ಟ ಬಂದ ಚಾನೆಲ್ ಬೇಕು ಎಂದರೆ ಮುಂಗಡವಾಗಿಯೇ ಹಣ ನೀಡಿ ಖರೀದಿಸಬೇಕು ಎಂಬುದು ಹೇಗೆ ಅರ್ಥವಾಗಲಿದೆ ಎಂಬ ಅಂಶವನ್ನೂ ಮುಂದಿಡುತ್ತಾರೆ.

Image result for cable dth

      ಟ್ರಾಯ್ ನಿಗದಿಪಡಿಸಿರುವ ಹೊಸ ದರದ ಅನ ್ವಯ ಹೊಸ ವ್ಯವಸ್ಥೆಯಲ್ಲಿ 100 ಚಾನೆಲ್ ಆಯ್ಕೆಗೆ ಅವಕಾಶವಿರುತ್ತದೆ. ಟ್ರಾಯ್ ಹೊಸದರ ನಿಗದಿ ನಿರ್ಧಾರವನ್ನು ಹಿಂಪಪಡೆಯಬೇಕು, ಇಲ್ಲವೇ ಹೊಸದರ ನಿಗದಿ ಕ್ರಮದಿಂದ ಗ್ರಾಹಕರಿಗೆ ಯಾವ ರೀತಿಯ ಅನನುಕೂಲ ಆಗಲಿದೆ ಎಂಬುದನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

        ಟಿವಿ ಚಾನಲ್‍ಗಳನ್ನು ಗ್ರಾಹಕರಿಗೆ ನೀಡುವ ಸಂಬಂಧ ಟ್ರಾಯ್ ರೂಪಿಸಿರುವ ಹೊಸ ಸುಂಕದ ಆದೇಶವನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಸಾವಿರಾರು ಕೇಬಲ್ ಟಿವಿ ಆಪರೇಟರ್‍ಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಗ್ರಹಿಸಿದರು
ಫ್ರೀಡಂ ಪಾರ್ಕ್‍ನಲ್ಲಿ ಸೇರಿದ ಸಾವಿರಾರು ಕೇಬಲ್ ಟಿವಿ ಆಪರೇಟರ್‍ಗಳು ಪ್ರತಿಭಟನೆ ನಡೆಸಿ ಟ್ರಾಯ್‍ನ ಹೊಸ ಸುಂಕದ ನೀತಿಯಿಂದ ಕೇಬಲ್ ಉದ್ಯಮವನ್ನೇ ನಂಬಿರುವ ಸಾವಿರಾರು ಕುಟುಂಬಗಳು ಬೀದಿಪಾಲಾಗಲಿವೆ ಆಕ್ರೋಶ ವ್ಯಕ್ತಪಡಿಸಿದರು.

          ಹೊಸ ಸುಂಕದ ಆದೇಶದಿಂದ ಬ್ರಾಡ್ ಕಾಸ್ಟರ್ ಹಾಗೂ ಕೇಬಲ್ ಆಪರೇಟರ್‍ಗೆ ಹಣ ಹಂಚಿಕೆ ವಿಷಯದಲ್ಲಿ ಗಂಡಾಂತರ ಪರಿಣಮಿಸಲಿದ್ದು, ಕೇಬಲ್ ಆಪರೇಟರ್‍ಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೂಡಲೇ ಹೊಸ ಸುಂಕದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಕೇಬಲ್ ಟಿವಿ ಆಪರೇಟರ್‍ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆಗ್ರಹಿಸಿದರು.

           ಕೇಬಲ್ ಆಪರೇಟರ್‍ಗಳು ಆರ್ಥಿಕವಾಗಿ ಹಿಂದುಳಿದಿದ್ದು, ಕನಿಷ್ಟ ತಿಳುವಳಿಕೆಯನ್ನು ಹೊಂದಿರುತ್ತಾರೆ. ಅವರಿಗೆ ಕಾಪೆರ್ರೇಟ್ ಕಂಪನಿಗಳಿಂದಾಗಲಿ, ಚಾನಲ್‍ಗಳಿಂದಾಗಲಿ ನೆರವು ಪಡೆಯುವುದಿಲ್ಲ. ಕಾಲಕಾಲಕ್ಕೆ ತಂತ್ರಜ್ಞಾನವನ್ನು ಬಲಪಡಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಕಷ್ಟಪಟ್ಟು ಉದ್ಯಮವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಕೇಬಲ್ ಆಪರೇಟರ್‍ಗಳಿಗೆ ಕಾಪೆರ್ರೇಟ್ ಕಂಪನಿಗಳು ಹೊಡೆತ ನೀಡುತ್ತಿರುವುದು ಸರಿಯಲ್ಲ ಎಂದರು.

           ಪೇ ಚಾನಲ್‍ಗಳ ವಿಷಯ ಬಂದಾಗಲೂ ಕೇಬಲ್ ಆಪರೇಟರ್‍ಗಳಿಗೆ ಅನ್ಯಾಯವಾಗಿದೆ. ಬ್ರಾಡ್ ಕಾಸ್ಟರ್‍ಗಳು ಶೇ. 95 ರಷ್ಟು ಹಣವನ್ನು ಜಾಹೀರಾತುಗಳಿಂದಲೇ ಪಡೆಯುತ್ತಿದ್ದು, ನಿರಂತರವಾಗಿ ದಿನದ 24 ಗಂಟೆಗಳ ಕಾಲ ಗ್ರಾಹಕರಿಗೆ ಚಾನಲ್‍ಗಳನ್ನು ತಲುಪಿಸುತ್ತಿರುವ ಕೇಬಲ್ ಆಪರೇಟರ್‍ಗಳ ಸಂಕಷ್ಟ ನಿವಾರಿಸುವಂತೆ ಅವರು ಆಗ್ರಹಿಸಿದರು. ಟ್ರಾಯ್ ಹೊಸ ಸುಂಕದ ಆದೇಶವನ್ನು ಹಿಂತೆಗೆದುಕೊಳ್ಳದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ