ಮಡಿಕೇರಿ :
ಆಸ್ತಿ ವಿಷಯವಾಗಿ ಉಂಟಾದ ವಿವಾದದಿಂದಾಗಿ ಸೊಸೆಯ ಮೇಲೆ ಮಾವನೇ ಗುಂಡು ಹಾರಿಸಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮೊದಲೇ ಆಸ್ತಿ ವಿಷಯವಾಗಿ ಇವರ ನಡುವೆ ಕಲಹ ಏರ್ಪಟ್ಟಿತ್ತು. ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ದನ ಕಟ್ಟುವ ವಿಚಾರಕ್ಕೆ ರಸ್ತೆಯಲ್ಲೇ ಮಾವ-ಸೊಸೆ ನಡುವೆ ಜಗಳ ಶುರುವಾಗಿತ್ತು.
ಇವರಿಬ್ಬರ ನಡುವಿನ ಜಗಳ ಆಸ್ತಿ ವಿವಾದಕ್ಕೆ ತಿರುಗಿ ಕೊನೆಗೆ ಮಾವನಿಗೆ ಸಿಟ್ಟು ಹೆಚ್ಚಾಗಿ ಸೊಸೆ ಎಡಗೈ ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ತೀರ್ಥ ಅವರಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ