ನವದೆಹಲಿ :
ಮಹಾ ಕ್ರೂರಿ ಕೊರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ಕಳೆದ ಮೂರು ದಿನಗಳಿಂದ ಬಿಡದೆ ಬೆಲೆ ಏರಿಕೆಯಾಗುತ್ತಲೇ ಇದೆ.
ಹೌದು, ಇಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 12 ಪೈಸೆ ಹೆಚ್ಚಳ ಮಾಡಲಾಗಿದೆ. ಆಗಸ್ಟ್ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ಪೈಸೆ ಹೆಚ್ಚಳ ಮಾಡಿತ್ತು. ಬಳಿಕ ಆಗಸ್ಟ್ 17ರಂದು 16 ಪೈಸೆ ಹೆಚ್ಚಿಸಿತ್ತು. ಈಗ ಆಗಸ್ಟ್ 18ರಿಂದ ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 17 ಪೈಸೆ ಹೆಚ್ಚಳ ಮಾಡಿದೆ. ಒಟ್ಟು ಮೂರು ದಿನಗಳಿಂದ 47 ಪೈಸೆ ಏರಿಸಿದೆ.
ಜೂನ್ ಹಾಗೂ ಜುಲೈ ತಿಂಗಳಿನಲ್ಲಿಯೂ ಇಂಧನ ಬೆಲೆ ಏರಿಕೆ ನಿರಂತರವಾಗಿತ್ತು. ಇದೀಗ ಆಗಸ್ಟ್ ತಿಂಗಳಲ್ಲಿ ಇಂಧನ ಬೆಲೆ ಕಡಿಮೆಯಾಗಬಹುದು ಎಂದುಕೊಂಡಿದ್ದ ವಾಹನ ಸವಾರರಿಗೆ ಮತ್ತೆ ನಿರಾಸೆಯುಂಟಾಗಿದ್ದು, ಪೆಟ್ರೋಲ್ ದರ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ