ಬೆಳಗಾವಿ
ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ವ್ಯಾಪ್ತಿಯಲ್ಲಿ ಮುಂಬೈ ನಿಂದ ಅಥಣಿ ಎಸ.ಆರ್ ಡಿಪೋ ಗೆ ಬರುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಈ ಘಟನೆ ನೋಡಿದ ಪ್ರತ್ಯಕ್ಷದರ್ಶಿಗಳು ಕಾಗವಾಡ ಪೋಲಿಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ವಾಹನ ಸಂಖ್ಯೆ KA 53 D3029 ನಂಬರಿನ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾದ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಂದ ಪೊಲೀಸ್ ಹಾಗು ಅಗ್ನಿ ಶಾಮಕ ಸಿಬ್ಬಂದಿ ಯಾವುದೆ ಪ್ರಾಣಾಹಾನಿಯಾಗದಂತೆ ತಡೆದಿದ್ದಾರೆ.