ನವದೆಹಲಿ:
1990ನೇ ಇಸವಿಯಲ್ಲಿ ಸಲ್ಮಾನ್ ಖಾನ್ ಬಂಗಲೆಯಲ್ಲಿ ಕಳ್ಳತನ ನಡೆಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಒಡೆತನದ ಗೋರಾಯ್ ಮೂಲದ ಬಂಗ್ಲೆಯ ಕಾವಲುಗಾರ ಶಕ್ತಿ ಸಿದ್ದೇಶ್ವರ್ ರಾಣಾ ಎಂಬಾತನೇ ಬಂಧಿತ ಆರೋಪಿ.
1990ರಲ್ಲೆ ಕ್ರೈಂ ಬ್ರ್ಯಾಂಚ್ ಪೊಲೀಸರು ಈತನನ್ನ ಬಂಧಿಸಿದ್ದರು. ಆದ್ರೆ ಬೇಲ್ ಮೇಲೆ ರಿಲೀಸ್ ಆದ ನಂತರ ಗುರುತು ಸಿಗದಂತೆ ತಲೆಮರೆಸಿಕೊಂಡಿದ್ದ. ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಶಕ್ತಿ ಸಿದ್ದೇಶ್ವರ್ ರಾಣ ಕಳೆದ 29 ವರ್ಷಗಳಿಂದ ಮುಂಬೈನ ಗೊರೈ ಎಂಬ ಪ್ರದೇಶದಲ್ಲಿ ವಾಸವಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಪೊಲೀಸರಿಗೆ ದೊರೆತ ಮಾಹಿತಿ ಆಧಾರದ ಮೇಲೆ ಬುಧವಾರ ಖಾನ್ ಬಂಗ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಣಾನನ್ನು ಬುಧವಾರ ಬಂಧಿಸಿರುವುದಾಗಿ ವಿವರಿಸಿದರು.
ಆರೋಪಿಯನ್ನ ಕಳ್ಳತನ ನಡೆಸಿದ ಬಂಗಲೆಗೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಲಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಕಳ್ಳತನ ನಡೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/04/Salman-khan.gif)