ದಾವಣಗೆರೆ :
ಪೊಲೀಸ್ ಪೇದೆಯೊಬ್ಬ ‘ಪವರ್ ಆಫ್ ಪಾಕಿಸ್ತಾನ್’ ಎಂಬ ಫೇಸ್ ಬುಕ್ ಪೇಜ್ ಲೈಕ್ ಮಾಡಿ ವಾಟ್ಸಪ್ ಗ್ರೂಪ್ ನಲ್ಲಿ ಶೇರ್ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಪೊಲೀಸ್ ಪೇದೆ ಸನಾವುಲ್ಲಾ ಪಾಕಿಸ್ತಾನ ಪರವಾದ ಫೇಸ್ ಬುಕ್ ಪೇಜ್ ನ್ನು 2008 ಬ್ಯಾಚ್ ಎಂಬ ವಾಟ್ಸಪ್ ಗ್ರೂಪ್ ಗೆ ಶೇರ್ ಮಾಡಿದ್ದು, ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. 2014 ರಲ್ಲೂ ಇಂತದ್ದೇ ವಿಷಯವಾಗಿ ಸನಾವುಲ್ಲಾ ಅಮಾನತು ಆಗಿದ್ದ ಎನ್ನಲಾಗುತ್ತಿದೆ.
ಪಾಕ್ ಪರ ಘೋಷಣೆಗಳು, ಪಾಕ್ ಪರ ಫೇಸ್ ಬುಕ್ ಶೇರ್ ಮಾಡುವವರನ್ನು ಪತ್ತೆ ಹಚ್ಚಿ ಬಂಧಿಸಬೇಕಾದ ಪೊಲೀಸ್ ಇಲಾಖೆಯಲ್ಲಿಯೇ ಓರ್ವ ಪಾಕ್ ಪ್ರೇಮಿ ಪೇದೆಯಿರುವುದು ಬೇಸರದ ಸಂಗತಿಯಾಗಿದೆ.
