ಮಡಿಕೇರಿ:
ಕಾಡಾನೆ ದಾಳಿಯಿಂದಾಗಿ ಕೊಡಗು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್‌ಎಸ್‌ಐ ಬಿ.ಸಿ.ಚನ್ನಕೇಶವ (48) ಅವರು ಬಲಿಯಾಗಿದ್ದಾರೆ.
ಸೆ.3ರಂದು ತಾಲ್ಲೂಕಿನ ಕಡಗದಾಳು ಉಪ ಠಾಣೆಯ ಬಳಿ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿರುವಾಗ ಒಂಟಿ ಸಲಗವೊಂದು ದಿಢೀರ್ ದಾಳಿ ನಡೆಸಿತ್ತು. ನಂತರ ಸ್ಥಳದಲ್ಲೇ ಕುಸಿದು ಬಿದ್ದ ಚನ್ನಕೇಶವ ಅವರನ್ನು ಬಿಟ್ಟು ಕಾಡಾನೆ ಹೊರಟುಹೋಗಿತ್ತು.
ದಾಳಿಯಿಂದಾಗಿ ಚನ್ನಕೇಶವ ಅವರ ಎದೆ ಹಾಗೂ ಸೊಂಟ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಜೊತೆಗಿದ್ದ ಸಿಬ್ಬಂದಿ ಚನ್ನಕೇಶವ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಚನ್ನಕೇಶವ್ ಅವರು ಮೃತಪಟ್ಟಿದ್ದಾರೆ.
ಶನಿವಾರಸಂತೆ ಗ್ರಾಮದ ಚನ್ನಕೇಶವ 1996ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಎರಡು ವರ್ಷದಿಂದ ಡಿ.ಎ.ಆರ್ ನ ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ