ಹುಬ್ಬಳ್ಳಿ :

ದಲಿತರಿಗೆ ಸಿಎಂ ಪಟ್ಟ ತಪ್ಪಿಸಿದ ಕಾಂಗ್ರೆಸಿಗರು ಯಾರೆಂದು ಬಹಿರಂಗಪಡಿಸಲಿ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಹಲವು ಬಾರಿ ದಲಿತರನ್ನು ಸಿಎಂ ಆಗುವುದರಿಂದ ತಡೆಯಲಾಗಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕಾಂಗ್ರೆಸ್‌ನಲ್ಲಿ ದಲಿತರು ಸಿಎಂ ಆಗುವುದನ್ನು ಯಾರ ನೇತೃತ್ವದಲ್ಲಿ ಯಾವಾಗ ಹೇಗೆ ತಡೆಯಲಾಯಿತು ಎಂಬುದನ್ನು ಜಿ. ಪರಮೇಶ್ವರ್ ಅವರು ತಿಳಿಸಲಿ ಎಂದಿದ್ದಾರೆ.
“ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಕಾಲದಿಂದಲೂ ದಲಿತರನ್ನು ತುಳಿಯುವ ಷಡ್ಯಂತ್ರ ಮಾಡುತ್ತಾ ಬಂದಿದೆ. ನೆಹರು ಬೆಂಬಲಿಗರ ಪಡೆಯು ಮುಂದೆ ನಿಂತು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು. ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಈಗ ಖರ್ಗೆ ಮತ್ತು ಪರಮೇಶ್ವರ್ ಅವರನ್ನು ಸಿಎಂ ಸ್ಥಾನದಿಂದ ವಂಚಿತರನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಇತಿಹಾಸ ನೋಡಿದಾಗ ದಲಿತ ವಿರೋಧಿ ಎಂಬುದು ಗೊತ್ತಾಗುತ್ತೆ” ಎಂದು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








