ಹಾಸನ :
‘ಜೆಡಿಎಸ್ ಪಕ್ಷದ ಪರವಾಗಿ ನಾನಿಂದು ಪ್ರಚಾರಕ್ಕೆ ಇಳಿಯುತ್ತಿದ್ದೇನೆ. ಹಾಸನ ಕ್ಷೇತ್ರದಿಂದ ಪಕ್ಷವು ಯಾರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೂ ನಾನು ಅವರ ಪರ ಪ್ರಚಾರ ಮಾಡುತ್ತೇನೆ, ನಮಗೆಲ್ಲಾ ಜೆಡಿಎಸ್ ಗೆಲುವು ಮುಖ್ಯ’ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರಕ್ಕೆ ಜೆ.ಡಿ.ಎಸ್. ಅಭ್ಯರ್ಥಿ ಯಾರೆಂದು ಇನ್ನೂ ಫೈನಲ್ ಆಗಿಲ್ಲವಾದರೂ ಬಹುತೇಕ ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರೇ ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
ಹಾಸನ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧವಾಗಿರುವ ಪ್ರಜ್ವಲ್ ರೇವಣ್ಣ ಇಂದಿನಿಂದ ಬಿರುಸಿನ ಪ್ರಚಾರ ಶುರು ಮಾಡಲಿದ್ದಾರೆ. ಪ್ರಜ್ವಲ್ ರೇವಣ್ಣ ಹೊಳೆನರಸೀಪುರದಲ್ಲಿಂದು ಮೂಡಲಹಿಪ್ಪೆ ಚೆನ್ನಕೇಶವನಿಗೆ ವಿಶೇಷ ಪೂಜೆ ಮಾಡಿಸಿದ ರೇವಣ್ಣ ಕುಟುಂಬ, ದೇವರ ಆಶೀರ್ವಾದ ಪಡೆದು ಪ್ರಚಾರಕ್ಕೆ ರೆಡಿಯಾಗಿದ್ದಾರೆ.
ಇನ್ನು ಭವಾನಿ ರೇವಣ್ಣ ತಮ್ಮ ಮಗ ಪ್ರಜ್ವಲ್ ರೇವಣ್ಣ ಗೆ ಮಂಗಳಮುಖಿಯವರಿಂದ ರಾಹು ಕಾಲ ಮುಗಿದ ನಂತರ ಸಂಪ್ರದಾಯದ ಪ್ರಕಾರ ಪೂರ್ವ ದಿಕ್ಕಿನಲ್ಲಿ ನಿಲ್ಲಿಸಿ ಪ್ರಜ್ವಲ್ ಗೆ ಆರತಿ ಮಾಡಿಸಿ, ಆಶೀರ್ವಾದ ಮಾಡಿಸಿದ್ದಾರೆ.
ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
