ಬೆಳಗಾವಿ:
ಟಿಪ್ಪು ಸುಲ್ತಾನನಿಂದ ನಮ್ಮ ಕುಟುಂಬಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ನಮ್ಮ ರಾಜ ವಂಶಸ್ಥರು ವೈಯಕ್ತಿವಾಗಿ ಟಿಪ್ಪು ಜಯಂತಿ ಸಮರ್ಥನೆ ಮಾಡುವುದಿಲ್ಲ. ಅದನ್ನು ವಿರೋಧಿಸುವುದು ಇಲ್ಲ, ಸ್ವಾಗತಿಸುವುದೂ ಇಲ್ಲ. ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ನಗರದ ಕೆಎಲ್ಇ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಆರಂಭಿಸಿರುವ ಫಿಸಿಯೋಥೆರಫಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ನಮ್ಮ ಕುಟುಂಬಕ್ಕೆ ಬಹಳ ತೊಂದರೆ ಕೊಟ್ಟಿದ್ದಾರೆ. ಅದನ್ನು ಈಗ ಮಾತನಾಡಿ ಪ್ರಯೋಜನವಿಲ್ಲ. ಹೀಗಾಗಿ ಟಿಪ್ಪು ಸುಲ್ತಾನ್ ಜಯಂತಿ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಸರ್ಕಾರದವರು ಒಂದು ಕುಟುಂಬಕ್ಕೆ ತೊಂದರೆಯಾದರೇನು ಅಂತ ನೋಡುತ್ತಿರಬಹುದು. ಯಾವ ಆಧಾರದ ಮೇಲೆ ಜಯಂತಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಕಾರ್ಯಕ್ರಮವನ್ನು ವೈಯಕ್ತಿಕವಾಗಿ ಬೆಂಬಲಿಸುವುದಿಲ್ಲ. ಆ ಬಗ್ಗೆ ಮಾತನಾಡಿದರೆ ಮನಸ್ಸಿಗೆ ನೋವಾಗುವುದೇ ಜಾಸ್ತಿ’ ಎಂದರು.
ಇನ್ನು ತಮ್ಮ ರಾಜಕೀಯ ಪ್ರವೇಶದ ಕುರಿತು ಪ್ರತಿಕ್ರಿಯಿಸಿರುವ ರಾಜಮಾತೆ, ‘ಪ್ರತಿ ಚುನಾವಣೆಯಲ್ಲೂ ಮೂರೂ ಪಕ್ಷದವರೂ ನಮ್ಮನ್ನು ಭೇಟಿ ಮಾಡಿ ರಾಜಕೀಯದ ಆಸಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಬರುತ್ತಾರೆ. ಆಸಕ್ತಿ ಇಲ್ಲ ಎಂದಾಗ ಸುಮ್ಮನಾಗುತ್ತಾರೆ’ ಎಂದರು. ರಾಜಕೀಯಕ್ಕೆ ಸೇರದೆ ಜನರ ಸೇವೆ ಮಾಡುತ್ತೇವೆ. ಚುನಾವಣೆಯಲ್ಲಿ ನಿಲ್ಲುವ ಆಸಕ್ತಿ ಇಲ್ಲ. ಪುತ್ರ ಯದುವೀರ್ ಕೂಡ ಸದ್ಯಕ್ಕೆ ರಾಜಕೀಯ ಪ್ರವೇಶ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಅವರು ಮನಸ್ಸು ಬದಲಾಯಿಸಿದರೆ ಗೊತ್ತಿಲ್ಲ ಎಂದು ರಾಜವಂಶಸ್ಥೆ ಒಡೆಯರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ