ಬೆಂಗಳೂರು :
ಜ.1 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಶಿಫಾರಸು ಮಾಡಿದ್ದು, ಅದನ್ನು ಟೆಲಿಕಾಂ ಇಲಾಖೆ ಒಪ್ಪಿಗೆ ಸೂಚಿಸಿದೆ.
ಬದಲಾದ ನಿಯಮ ಏನೆಂದರೆ ಯಾವುದೇ ಲ್ಯಾಂಡ್ಲೈನ್ ಫೋನ್ನಿಂದ ಮೊಬೈಲ್ ಫೋನ್ಗೆ ಕರೆ ಮಾಡುವಾಗ ಆರಂಭದಲ್ಲಿ ಜೀರೋ ಸೇರಿಸುವುದು ಕಡ್ಡಾಯ.
ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಪ್ರಸ್ತಾವನೆಯನ್ನು ದೂರಸಂಪರ್ಕ ಇಲಾಖೆ ಅನುಮೋದಿಸಿದ್ದು ಹೊಸ ವರ್ಷದಿಂದ ದೇಶದ ಯಾವುದೇ ಲ್ಯಾಂಡ್ಲೈನ್ ಫೋನ್ನಿಂದ ಮೊಬೈಲ್ ಸಂಖ್ಯೆಯನ್ನು ಡಯಲ್ ಮಾಡುವ ವಿಧಾನವು ಸಂಪೂರ್ಣವಾಗಿ ಬದಲಾಗುತ್ತದೆ.
ವ್ಯಕ್ತಿಯ ಲ್ಯಾಂಡ್ಲೈನ್ನಲ್ಲಿ ಸೊನ್ನೆ ಒತ್ತದೇ ನೇರವಾಗಿ ಮೊಬೈಲ್ ನಂಗೆ ಕರೆ ಮಾಡಿದರೆ ಆಗ ಸೊನ್ನೆ ಒತ್ತಬೇಕೆಂಬ ಬಗ್ಗೆ ವಾಯ್ಸ್ ರೆಕಾರ್ಡ್ ಪ್ಲೇ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಪ್ರಸ್ತುತ ಈ ಸೌಲಭ್ಯವು ನಿಮ್ಮ ಪ್ರದೇಶದ ಹೊರಗಿನ ಕರೆಗಳಿಗೆ ಲಭ್ಯವಿದೆ. ಈ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಟೆಲಿಕಾಂ ಕಂಪನಿಗಳಿಗೆ ಜನವರಿ 1 ರವರೆಗೆ ಕಾಲಾವಕಾಶ ನೀಡಿದೆ.
ಇದು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಹೆಚ್ಚಿನ ಸಂಖ್ಯೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಮೊಬೈಲ್ ಮತ್ತು ಲ್ಯಾಂಡ್ಲೈನ್ ಸೇವೆಗಳಿಗೆ ಸಾಕಷ್ಟು ಸಂಖ್ಯೆಗಳನ್ನು ರಚಿಸಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/11/Landline.jpg)